ADVERTISEMENT

ನಾರದಾ ಸ್ಟಿಂಗ್‌: ಪ್ರಮಾಣಪತ್ರ ಸಲ್ಲಿಸಲು ಅವಕಾಶ ‘ಸುಪ್ರೀಂ’ ಮೆಟ್ಟಿಲೇರಿದ ಮಮತಾ

ಪಿಟಿಐ
Published 21 ಜೂನ್ 2021, 15:20 IST
Last Updated 21 ಜೂನ್ 2021, 15:20 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ನವದೆಹಲಿ (ಪಿಟಿಐ): ನಾರದಾ ಸ್ಟಿಂಗ್‌ ಪ್ರಕರಣದಲ್ಲಿ ಪ್ರಮಾಣಪತ್ರವನ್ನು ಸಲ್ಲಿಸಲು ತಮಗೆ ಅವಕಾಶವನ್ನು ನಿರಾಕರಿಸಿದ ಕಲ್ಕತ್ತ ಹೈಕೋರ್ಟ್‌ನ ತೀರ್ಮಾನವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.

ಪ್ರಕರಣ ಸಂಬಂಧ ತೃಣಮೂಲ ಕಾಂಗ್ರೆಸ್‌ನ ನಾಲ್ವರು ಮುಖಂಡರನ್ನು ಬಂಧಿಸಲು ಸಿಬಿಐ ಮುಂದಾಗಿದ್ದ ಮೇ 17ರಂದು ತಮ್ಮ ಪಾತ್ರ ಕುರಿತು ಪ್ರಮಾಣಪತ್ರ ಸಲ್ಲಿಸಲು ಮಮತಾ ಬ್ಯಾನರ್ಜಿ ಮತ್ತು ರಾಜ್ಯದ ಕಾನೂನು ಸಚಿವ ಮೊಲೊಯ್‌ ಘಾಟಕ್ ಅವರಿಗೆ ಹೈಕೋರ್ಟ್ ಅವಕಾಶ ನಿರಾಕರಿಸಿತ್ತು.

ಈ ಅರ್ಜಿಯು ಮಂಗಳವಾರ ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತಾ, ಅನಿರುದ್ಧ ಬೋಸ್‌ ಅವರಿರುವ ಪೀಠದ ಎದುರು ವಿಚಾರಣೆಗೆ ಬರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.