ADVERTISEMENT

ಸ್ತನ್ಯಪಾನದ ಮಹತ್ವ: ಆನ್‌ಲೈನ್‌ ಮೂಲಕ ಜಾಗೃತಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾಹಿತಿ

ಪಿಟಿಐ
Published 1 ಆಗಸ್ಟ್ 2020, 11:16 IST
Last Updated 1 ಆಗಸ್ಟ್ 2020, 11:16 IST
ಕೇಂದ್ರ ಸಚಿವೆ ಸ್ಮೃತಿ ಇರಾನಿ
ಕೇಂದ್ರ ಸಚಿವೆ ಸ್ಮೃತಿ ಇರಾನಿ   

ನವದೆಹಲಿ:ಸ್ತನ್ಯಪಾನದ ಮಹತ್ವವನ್ನು ಜನರಿಗೆ ತಿಳಿಸುವ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಆನ್‌ಲೈನ್‌ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶನಿವಾರ ಹೇಳಿದ್ದಾರೆ.

ಆಗಸ್ಟ್‌ 1ರಿಂದ ಆರಂಭವಾಗುವ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು.

‘ಸ್ವಸ್ಥ ಗ್ರಹಕ್ಕಾಗಿ ಸ್ತನ್ಯಪಾನ ಬೆಂಬಲಿಸಿ’ ಎಂಬುದು ಈ ಬಾರಿಯ ಸಪ್ತಾಹದ ಧ್ಯೇಯವಾಕ್ಯ. ಕೋವಿಡ್‌ ಪಿಡುಗಿರುವ ಈ ಸಂದರ್ಭದಲ್ಲಿ ಸ್ತನ್ಯಪಾನದ ವೇಳೆ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಬಗ್ಗೆಯೂ ಸಚಿವಾಲಯದ ಅಧಿಕಾರಿಗಳು ತಿಳಿ ಹೇಳುವರು’ ಎಂದು ಇರಾನಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.