ADVERTISEMENT

ಹರತಾಳಕ್ಕೆ ಬೆಂಬಲವಿಲ್ಲ: ಅಂಗಡಿಗಳು ತೆರೆಯುವುದಾಗಿ ಹೇಳಿದ ವ್ಯಾಪಾರಿಗಳು

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 10:39 IST
Last Updated 2 ಜನವರಿ 2019, 10:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿರುವುದನ್ನು ಪ್ರತಿಭಟಿಸಿ ಶಬರಿಮಲೆಕರ್ಮ ಸಮಿತಿ ಆಹ್ವಾನ ನೀಡಿರುವ ಹರತಾಳಕ್ಕೆ ನಮ್ಮ ಬೆಂಬಲ ಇಲ್ಲ ಎಂದು ವ್ಯಾಪಾರಿ ಸಂಘಟನೆಗಳು ಹೇಳಿವೆ. ಕೇರಳದ ವ್ಯಾಪಾರಿ ವ್ಯವಸಾಯಿ ಸಂಘಟನೆಯಲ್ಲಿರುವ ಅಂಗಡಿಗಳು ಗುರುವಾರತೆರೆಯಲಿವೆ.

ಅದೇ ವೇಳೆ ವ್ಯವಸಾಯಿ ಏಕೋಪನ ಸಮಿತಿ ಈ ಹರತಾಳಕ್ಕೆ ಸಹಕಾರ ನೀಡುವುದಿಲ್ಲ ಎಂದು ಸಂಘಟನೆಯ ಅಧ್ಯಕ್ಷ ಟಿ. ನಾಸಿರುದ್ದೀನ್ ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಹರತಾಳಕ್ಕೆ ಬೆಂಬಲ ನೀಡುವುದಿಲ್ಲ ಎಂದು ಕ್ಯಾಲಿಕಟ್ ಚೇಂಬರ್ ಆಫ್ ಕಾಮರ್ಸ್ ಹೇಳಿದೆ.ಕೋಯಿಕ್ಕೋಡ್‍ನ ಮಿಠಾಯಿ ರಸ್ತೆ ಸೇರಿದಂತೆ ಉಳಿದ ಭಾಗಗಳಲ್ಲೂ ಅಂಗಡಿಗಳು ತೆರೆದು ಕಾರ್ಯವೆಸಗಲಿವೆ.

ADVERTISEMENT

ಪದೇ ಪದೇ ಹರತಾಳಗಳು ನಡೆಯುತ್ತಿರುವುದರಿಂದ ಈ ರೀತಿಯ ಹರತಾಳಕ್ಕೆ ನಮ್ಮ ಬೆಂಬಲವಿಲ್ಲ ಎಂದು ವ್ಯಾಪಾರಿ ಸಂಘಟನೆಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.