ADVERTISEMENT

ನಿಪ್ಪಾಣಿ, ಬೆಳಗಾವಿ ಬಿಟ್ಟುಕೊಟ್ಟರೆ, ಕೆಲ ಪ್ರದೇಶ ಕೊಡಲು ಯೋಚಿಸಬಹುದು: ಪವಾರ್

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 14:02 IST
Last Updated 25 ನವೆಂಬರ್ 2022, 14:02 IST
   

ಮುಂಬೈ:ಗಡಿ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಎನ್‌ಸಿಪಿ ವರಿಷ್ಠ ಶರದ್‌ ಪವಾರ್, ‘ನಿಪ್ಪಾಣಿ, ಬೆಳಗಾವಿ ಸೇರಿದಂತೆ ಕೆಲ ಊರುಗಳನ್ನು ಬಿಟ್ಟು ಕೊಡಲುಕರ್ನಾಟಕ ಒಪ್ಪಿದರೆ, ಅದಕ್ಕೆ ಪ್ರತಿಯಾಗಿ ಕೆಲ ಪ್ರದೇಶಗಳನ್ನು ಬಿಟ್ಟು ಕೊಡುವ ಬಗ್ಗೆ ನಾವೂ ಯೋಚಿಸಬಹುದು’ ಎಂದು ಹೇಳಿದ್ದಾರೆ.

‘ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದದಿಂದ ಬಿಜೆಪಿ ಪಲಾಯನ ಮಾಡಲು ಸಾಧ್ಯವಿಲ್ಲ’ ಎಂದೂ ಅವರು ಪ್ರತಿಪಾದಿಸಿದರು.

ವಿರೋಧ ಪಕ್ಷಗಳ ಈ ಟೀಕೆಗಳಿಗೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ‘ಬಿಜೆಪಿಗಿಂತಲೂ ಹೆಚ್ಚಿನ ಅವಧಿಗೆ ಕಾಂಗ್ರೆಸ್‌ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆದಾಗ್ಯೂ, ಆ ಪಕ್ಷ ವಿವಾದವನ್ನು ಬಗೆಹರಿಸಲಿಲ್ಲ’ ಎಂದಿದ್ದಾರೆ.

ADVERTISEMENT

‘ಈ ವಿವಾದ ಈಗ ಕೋರ್ಟ್‌ನಲ್ಲಿದೆ’ ಎಂದ ಅವರು, ‘ಮಹಾರಾಷ್ಟ್ರದ ಒಂದು ಹಳ್ಳಿ ಕೂಡ ಕರ್ನಾಟಕ್ಕೆ ಹೋಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.