ADVERTISEMENT

ಪುದುಚೇರಿ: ಧರಣಿ ಕೈಬಿಟ್ಟ ಸಚಿವ

ಪಿಟಿಐ
Published 19 ಜನವರಿ 2021, 19:32 IST
Last Updated 19 ಜನವರಿ 2021, 19:32 IST
ಕಂದಸಾಮಿ ಅವರು ಧರಣಿ ಕುಳಿತಿದ್ದ ಸಂದರ್ಭ –ಪಿಟಿಐ ಚಿತ್ರ
ಕಂದಸಾಮಿ ಅವರು ಧರಣಿ ಕುಳಿತಿದ್ದ ಸಂದರ್ಭ –ಪಿಟಿಐ ಚಿತ್ರ   

ಪುದುಚೇರಿ: ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರ ಮನವೊಲಿಕೆಯ ಹಿನ್ನೆಲೆಯಲ್ಲಿ ಕಲ್ಯಾಣ ಸಚಿವ ಎಂ. ಕಂದಸಾಮಿ ಅವರು ಮಂಗಳವಾರ ಧರಣಿ ಕೈಬಿಟ್ಟಿದ್ದಾರೆ.

ತಮ್ಮ ಇಲಾಖೆಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳ ಕಡತಗಳಿಗೆ ಅನುಮೋದನೆ ನೀಡಲು ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಂದಸಾಮಿ ಅವರು ಇದೇ ತಿಂಗಳ 10ರಂದು ಧರಣಿ ಆರಂಭಿಸಿದ್ದರು.

ಧರಣಿ ನಿರತ ಸ್ಥಳದಲ್ಲಿ ಕಂದಸಾಮಿ ಅವರನ್ನು ಭೇಟಿ ಮಾಡಿದ ನಾರಾಯಣ ಸ್ವಾಮಿ ಅವರು ಇದೇ 21 ಇಲ್ಲವೇ 22ರಂದು ರಾಷ್ಟ್ರಪತಿ ಬಳಿ ಸಚಿವರ ನಿಯೋಗ ಕರೆದೊಯ್ಯಲಾಗುತ್ತದೆ. ಈಗ ಉದ್ಭವಿಸಿರುವ ಬಿಕ್ಕಟ್ಟು ಶಮನಗೊಳಿಸಲು ಪ್ರಯತ್ನಿಸಬೇಕೆಂದು ಅವರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಹೀಗಾಗಿ ಸಚಿವರು ಧರಣಿ ಅಂತ್ಯಗೊಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.