ADVERTISEMENT

ಪಶ್ಚಿಮ ಬಂಗಾಳ: ಬಿಜೆಪಿಯ ಲಾಕೆಟ್‌ ಚಟರ್ಜಿ ಪರ ಮಿಥುನ್‌ ಚಕ್ರವರ್ತಿ ಪ್ರಚಾರ

ಏಜೆನ್ಸೀಸ್
Published 2 ಏಪ್ರಿಲ್ 2021, 6:27 IST
Last Updated 2 ಏಪ್ರಿಲ್ 2021, 6:27 IST
ಮಿಥುನ್‌ ಚಕ್ರವರ್ತಿ
ಮಿಥುನ್‌ ಚಕ್ರವರ್ತಿ   

ಚುಚುರಾ (ಪಶ್ಚಿಮ ಬಂಗಾಳ): ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ನಟ ಮಿಥುನ್‌ ಚಕ್ರವರ್ತಿ ಅವರು ಚುಚುರಾ ವಿಧಾನಸಭೆ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಲಾಕೆಟ್‌ ಚಟರ್ಜಿ ಪರ ಪ್ರಚಾರ ನಡೆಸಿದರು.

ರವೀಂದ್ರ ನಗರದಿಂದ ಸಹಗಂಜ್‌ ದುನ್ಲಾಪ್‌ ವರೆಗೆ ನಡೆದ ರ‍್ಯಾಲಿಯಲ್ಲಿ ಭಾಗವಹಿಸಿದ ಮಿಥುನ್‌, ಚಟರ್ಜಿ ಹಾಗೂ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ಬಿಜೆಪಿಯು ಈ ಬಾರಿಯ ವಿಧಾನಸಭೆ ಚುನಾವಣೆಗೆ ಚಕ್ರವರ್ತಿ ಅವರನ್ನು ಪಕ್ಷದತಾರಾ ಪ್ರಚಾರರನ್ನಾಗಿ ನೇಮಿಸಿದೆ. ಮೂರನೇ ಹಂತದ ಮತದಾನ ಪ್ರಕ್ರಿಯೆ ಏಪ್ರಿಲ್‌ 6 ರಂದು ನಡೆಯಲಿದೆ.

ADVERTISEMENT

70 ವರ್ಷದ ಚಕ್ರವರ್ತಿ, ರಾಜ್ಯಸಭಾ ಸದಸ್ಯರಾಗಿ ಟಿಎಂಸಿ ಪಕ್ಷದಿಂದ ಆಯ್ಕೆಯಾಗಿದ್ದರು. ಆದರೆ 2016ರಲ್ಲಿಶಾರದಾ ಪೊಂಜಿ ಹಗರಣದಲ್ಲಿ ಹೆಸರು ಕೇಳಿಬಂದ ಬಳಿಕಅನಾರೋಗ್ಯದ ಕಾರಣದಿಂದರಾಜೀನಾಮೆ ನೀಡಿದ್ದರು.

ಪ್ರಚಾರ ನಡೆಸುತ್ತಿರುವಾಗಲಾಕೆಟ್ ಚಟರ್ಜಿ ಅವರ ಮುಖಕ್ಕೆ ಕೆಲವರು ಬಣ್ಣ ಎರಚಿದ್ದರು. ಆ ಬಗ್ಗೆ ಟಿಎಂಸಿ ವಿರುದ್ಧ ಕಿಡಿ ಕಾರಿದ್ದ ಚಟರ್ಜಿ ಅವರು, ನನ್ನ ಮುಖಕ್ಕೆ 'ಹಾನಿಕಾರಕ ರಾಸಾಯನಿಕಗಳು' ಇರುವ ಬಣ್ಣವನ್ನು ಎಸೆಯಲಾಗಿದೆ ಎಂದು ಆರೋಪಿಸಿದ್ದರು. ಇದು ಹೇಡಿತನದ ಕೃತ್ಯ ಎಂದು ಬಿಜೆಪಿಯೂ ವಾಗ್ದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.