ADVERTISEMENT

ಪಶ್ಚಿಮ ಬಂಗಾಳ ಚುನಾವಣೆ: ನಟ ಮಿಥುನ್‌ ಚಕ್ರವರ್ತಿ ಮುಂಬೈ ನಿವಾಸಕ್ಕೆ ಭಾಗವತ್ ಭೇಟಿ

ಮೃತ್ಯುಂಜಯ ಬೋಸ್
Published 16 ಫೆಬ್ರುವರಿ 2021, 9:29 IST
Last Updated 16 ಫೆಬ್ರುವರಿ 2021, 9:29 IST
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (ಪಿಟಿಐ ಚಿತ್ರ) ಹಾಗೂ ಮಿಥುನ್ ಚಕ್ರವರ್ತಿ (ಚಿತ್ರ ಕೃಪೆ: ಮಿಥುನ್ ಅವರ ಟ್ವಿಟರ್ ಖಾತೆ)
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (ಪಿಟಿಐ ಚಿತ್ರ) ಹಾಗೂ ಮಿಥುನ್ ಚಕ್ರವರ್ತಿ (ಚಿತ್ರ ಕೃಪೆ: ಮಿಥುನ್ ಅವರ ಟ್ವಿಟರ್ ಖಾತೆ)   

ಮುಂಬೈ: ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಖ್ಯಾತ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಸುಮಾರು 2 ಗಂಟೆ ಕಾಲ ಭಾಗವತ್ ಅವರು ಮಿಥುನ್ ನಿವಾಸದಲ್ಲಿದ್ದು, ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಿಥುನ್ ಅವರ ಕುಟುಂಬದವರೂ ಹಾಜರಿದ್ದರು.

ಮಿಥುನ್ ಅವರಿಗೆ ಪಶ್ಚಿಮ ಬಂಗಾಳದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಅನುಯಾಯಿಗಳಿದ್ದಾರೆ. ಅವರು ಇದಕ್ಕೂ ಮುನ್ನ 3 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಭೇಟಿಯಾಗಿದ್ದರು.

ಭೇಟಿ ಕುರಿತು ಪ್ರತಿಕ್ರಿಯಿಸಿರುವ ಮಿಥುನ್, ‘ನನಗೆ ಮೋಹನ್ ಭಾಗವತ್ ಜತೆ ಆಧ್ಯಾತ್ಮಿಕ ಬಾಂಧವ್ಯವಿದೆ. ಲಖನೌನಲ್ಲಿ ಅವರನ್ನು ಭೇಟಿಯಾಗಿದ್ದೆ. ಬಳಿಕ, ಮುಂಬೈಗೆ ಬಂದಾಗ ಮನೆಗೆ ಭೇಟಿ ನೀಡುವಂತೆ ಮನವಿ ಮಾಡಿದ್ದೆ’ ಎಂದು ಹೇಳಿದ್ದಾರೆ.

‘ಅವರು ನನ್ನ ಮನೆಗೆ ಬಂದಿದ್ದಾರೆ. ಆ ಬಗ್ಗೆ ಏನೇನೋ ಊಹಿಸಬೇಡಿ’ ಎಂದೂ ಮಿಥುನ್ ಹೇಳಿದ್ದಾರೆ.

ರಾಜ್ಯಸಭಾ ಸದಸ್ಯರೂ ಆಗಿದ್ದ ಮಿಥುನ್ ಅವರು ದೀರ್ಘ ಅವಧಿಯಿಂದ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜತೆ ನಿಕಟ ಬಾಂಧವ್ಯ ಹೊಂದಿದ್ದರು. 2016ರಲ್ಲಿ ಆರೋಗ್ಯ ಸಮಸ್ಯೆಯ ಕಾರಣ ನೀಡಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.