ADVERTISEMENT

ಸರ್ಕಸ್‌ ಕಂಪನಿ ಪ್ರಾಣಿಗಳ ಸ್ಥಿತಿಗತಿ: ಅಫಿಡವಿಟ್ ಸಲ್ಲಿಸಲು ಹೈಕೋರ್ಟ್‌ ಸೂಚನೆ

ಪಿಟಿಐ
Published 14 ಆಗಸ್ಟ್ 2021, 10:11 IST
Last Updated 14 ಆಗಸ್ಟ್ 2021, 10:11 IST
   

ನವದೆಹಲಿ: ಸ್ಥಗಿತಗೊಂಡಿರುವ ಸರ್ಕಸ್‌ ಕಂಪನಿಗಳಲ್ಲಿರುವ ಪ್ರಾಣಿಗಳ ಸ್ಥಿತಿಗತಿ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ (ಎಡಬ್ಲ್ಯುಬಿಐ) ದೆಹಲಿ ಹೈಕೋರ್ಟ್‌ ಸೂಚಿಸಿದೆ.

ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ಜಸ್ಮೀತ್‌ ಸಿಂಗ್‌ ಅವರಿರುವ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ, ಈ ಬಗ್ಗೆ ಮೂರು ವಾರಗಳೊಗೆ ಅಫಿಡವಿಟ್‌ ಸಲ್ಲಿಸುವಂತೆ ಎಡಬ್ಲ್ಯುಬಿಐಗೆ ನಿರ್ದೇಶನ ನೀಡಿದೆ.

‘ಈ ಹಿಂದೆ ಎಡಬ್ಲ್ಯುಬಿಐ ಸಲ್ಲಿಸಿದ ಅಫಿಡವಿಟ್‌ನಲ್ಲಿ ಪ್ರಾಣಿಗಳ ಸ್ಥಿತಿಗತಿ ಬಗ್ಗೆ ನಿಖರ ಮಾಹಿತಿಯನ್ನು ನೀಡಲಾಗಿಲ್ಲ’ ಎಂದು ಪೇಟಾ ಪರ ವಕೀಲ ಅಮನ್‌ ಹಿಂಗೊರಾನಿ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ADVERTISEMENT

‘ಕೋವಿಡ್‌–19 ನಿಂದಾಗಿ ಸ್ಥಗಿತಗೊಂಡಿರುವ ಸರ್ಕಸ್‌ ಕಂಪನಿಗಳು, ಪ್ರಾಣಿಗಳಿಗೆ ಆಹಾರ ನೀಡುವುದಕ್ಕೂ ಕಷ್ಟಪಡುತ್ತಿವೆ. ಇದರಿಂದ ಪ್ರಾಣಿಗಳು ಹಸಿವಿನಿಂದ ಬಳಲುತ್ತಿವೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.