ADVERTISEMENT

ಬ್ರಿಟನ್‌ಗೆ ಮೋದಿ: ದೇಶಭ್ರಷ್ಟರ ವರ್ಗಾವಣೆಗೆ ಒಪ್ಪಂದ ಬೇಕಿದೆ ಎಂದ ಕಾಂಗ್ರೆಸ್

ಪಿಟಿಐ
Published 24 ಜುಲೈ 2025, 6:14 IST
Last Updated 24 ಜುಲೈ 2025, 6:14 IST
<div class="paragraphs"><p>ನೀರವ್ ಮೋದಿ, ಲಲಿತ್ ಮೋದಿ, ವಿಜಯ್‌ ಮಲ್ಯ</p></div>

ನೀರವ್ ಮೋದಿ, ಲಲಿತ್ ಮೋದಿ, ವಿಜಯ್‌ ಮಲ್ಯ

   

ನವದೆಹಲಿ: ‘ಮುಕ್ತ ವ್ಯಾಪಾರ ಒಪ್ಪಂದಕ್ಕೆ(ಎಫ್‌ಟಿಎ) ಭಾರತ ಮತ್ತು ಬ್ರಿಟನ್‌ ಇಂದು ಲಂಡನ್‌ನಲ್ಲಿ ಹಾಕಲಿವೆ. ಆದರೆ, ಭಾರತಕ್ಕೆ ಬ್ರಿಟನ್‌ನಿಂದ ಬೇಕಾಗಿರುವುದು ದೇಶಭ್ರಷ್ಟರ ವರ್ಗಾವಣೆ ಮಾಡುವ ಮತ್ತೊಂದು ಎಫ್‌ಟಿಎ(ಫ್ಯುಜಿಟಿವ್ ಟ್ರಾನ್ಸ್‌ಫರ್ ಅಗ್ರಿಮೆಂಟ್‌) ಘೋಷಣೆಯಾಗಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಮೋದಿ ಮಾಡೆಲ್‌ನ ಮೂವರು ತಾರೆಯರಾದ ವಿಜಯ್‌ ಮಲ್ಯ, ನೀರವ್‌ ಮೋದಿ ಮತ್ತು ಲಲಿತ್ ಮೋದಿ ಇನ್ನೂ ತಮ್ಮ ‘ಘರ್‌ ವಾಪಸಿ’ಗಾಗಿ ಕಾಯುತ್ತಿದ್ದಾರೆ. ಇವರಂತೆ ಇನ್ನು ಹಲವರು ಇರುವ ಸಾಧ್ಯತೆಯಿದೆ’ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

‘ಮುಕ್ತ ವ್ಯಾಪಾರ ಒಪ್ಪಂದಕ್ಕಿಂತ ದೇಶಭ್ರಷ್ಟರ ವರ್ಗಾವಣೆಗಾಗಿ ಮತ್ತೊಂದು ಒಪ್ಪಂದ ಮಾಡಿಕೊಳ್ಳಬೇಕಿದೆ’ ಎಂದಿದ್ದಾರೆ.

ಏತನ್ಮಧ್ಯೆ, ಬ್ರಿಟನ್‌ ಜೊತೆ ಮುಕ್ತ ವ್ಯಾಪರ ಒಪ್ಪಂದ ಮಾಡಿಕೊಳ್ಳುವುದರಿಂದ ಭಾರತದ ದೇಶೀಯ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ ಎಂದು ಕಾಂಗ್ರೆಸ್‌ ಆತಂಕ ವ್ಯಕ್ತಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ ಹಾಗೂ ಮಾಲ್ದೀವ್ಸ್‌ಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಇಂದು ಬ್ರಿಟನ್‌ ತಲುಪಿರುವ ಅವರು ಅಲ್ಲಿಯ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆ ಹೂಡಿಕೆ, ವ್ಯಾಪಾರ, ರಕ್ಷಣೆ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ತದನಂತರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.