ADVERTISEMENT

ಸ್ಪೀಕರ್‌ಗೆ ಒಲಿಯಲಿದೆಯೇ ಗೋವಾ ಸಿಎಂ ಹುದ್ದೆ?

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 12:55 IST
Last Updated 18 ಮಾರ್ಚ್ 2019, 12:55 IST
ವಿಶ್ವಜಿತ್ ರಾಣೆ ಮತ್ತು ಪ್ರಮೋದ್ ಸಾವಂತ್
ವಿಶ್ವಜಿತ್ ರಾಣೆ ಮತ್ತು ಪ್ರಮೋದ್ ಸಾವಂತ್   

ಪಣಜಿ: ಹೀಗೊಂದು ಪ್ರಶ್ನೆ ಗೋವಾ ಬಿಜೆಪಿ ಕಾರ್ಯಕರ್ತರನ್ನು ಕಾಡತೊಡಗಿದೆ.ಒಂದೆಡೆ ಮನೋಹರ್ ಪರ‍್ರೀಕರ್ ಅಂತ್ಯ ಸಂಸ್ಕಾರ ನಡೆಯುತ್ತಿದ್ದರೆ, ಮತ್ತೊಂದು ಕಡೆ ಗೋವಾ ಮುಖ್ಯಮಂತ್ರಿ ಪಟ್ಟಕ್ಕೆ ಯಾರನ್ನು ತರಬೇಕು ಎಂದು ಗೋವಾ ಬಿಜೆಪಿ ಘಟಕದಲ್ಲಿ ಚಿಂತನೆ ಆರಂಭವಾಗಿದೆ.

ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರ‍್ರೀಕರ್ ಅವರ ಅಕಾಲಿಕ ಮರಣದಿಂದಾಗಿ ತೆರವಾಗಿರುವ ಗೋವಾ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ. ಸಿಎಂ ಸ್ಥಾನಕ್ಕೆ ಈಗ ಕೇಳಿಬರುತ್ತಿರುವ ಎರಡು ಪ್ರಮುಖ ಹೆಸರುಗಳೆಂದರೆ, ಗೋವಾ ವಿಧಾನಸಭಾ ಸ್ಪೀಕರ್ ಆಗಿರುವ ಪ್ರಮೋದ್ ಸಾವಂತ್ ಹಾಗೂಆರೋಗ್ಯ ಸಚಿವರಾಗಿರುವ ವಿಶ್ವಜಿತ್ ರಾಣೆ.

ಮನೋಹರ್ ಪರ‍್ರೀಕರ್ ಅವರ ಆತ್ಮೀಯರುಎಂತಲೇ ಬಿಂಬಿತರಾಗಿರುವಪ್ರಮೋದ್ ಸಾವಂತ್ ಅವರ ಹೆಸರು ಸಿಎಂ ಸ್ಥಾನಕ್ಕೆ ಹೆಚ್ಚಾಗಿಕೇಳಿ ಬರುತ್ತಿದೆ. ಪರ‍್ರೀಕರ್ ಗರಡಿಯಲ್ಲಿಯೇ ಪಳಗಿರುವ ಮತ್ತೊಬ್ಬ ವ್ಯಕ್ತಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ. ಸಿಎಂ ಹುದ್ದೆಗೆ ಇವರಹೆಸರೂ ಕೇಳಿ ಬರುತ್ತಿದೆ.

ADVERTISEMENT

ಮುಖ್ಯಮಂತ್ರಿ ಆಯ್ಕೆಗೆಂದೇ ಕೇಂದ್ರ ಸಚಿವ ನಿತಿನ ಗಡ್ಕರಿ ನೇತೃತ್ವದಲ್ಲಿ ಗೋವಾ ಬಿಜೆಪಿ ಮುಖಂಡರ ಸಭೆ ಭಾನುವಾರ ರಾತ್ರಿ ನಡೆಯಿತು. ತಡರಾತ್ರಿ 2 ಗಂಟೆಯವರೆಗೂ ನಡೆದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯಾರುಎಂಬ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಆದರೂ ನಿತನ್ ಗಡ್ಕರಿ ಇಂದು ಸಂಜೆಯ ವೇಳೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಮನೋಹರ್ ಪರ‍್ರೀಕರ್ ಅಂತ್ಯಸಂಸ್ಕಾರ ನಡೆಯುತ್ತಿರುವ ಕಾರಣ ಮುಖ್ಯಮಂತ್ರಿ ಅಭ್ಯರ್ಥಿಯ ಪ್ರಕಟಣೆ ಸಾಧ್ಯವಾಗಿಲ್ಲ.

ಇಬ್ಬರ ನಡುವೆ ಗೋವಾ ಸಿಎಂ ಯಾರಾಗುತ್ತಾರೆ ಎಂಬುದನ್ನ ಸದ್ಯದಲ್ಲಿಯೇ ಗಡ್ಕರಿ ಪ್ರಕಟಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.