ADVERTISEMENT

ನಾನು ವಿಯೆಟ್ನಾಂನಲ್ಲಿ ಹುಟ್ಟಬೇಕು ಎಂದು ಜಾರ್ಜ್‌ ಫರ್ನಾಂಡಿಸ್‌ ಹೇಳಿದ್ದು ಯಾಕೆ?

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 9:30 IST
Last Updated 29 ಜನವರಿ 2019, 9:30 IST
   

ಬೆಂಗಳೂರು: ಪುನರ್ಜನ್ಮವಿದ್ದರೆನಾನು ವಿಯೆಟ್ನಾಂದೇಶದಲ್ಲಿ ಹುಟ್ಟ ಬೇಕು ಎಂಬ ಇಂಗಿತವನ್ನು ಜಾರ್ಜ್‌ ಫರ್ನಾಂಡಿಸ್‌ ವ್ಯಕ್ತಪಡಿಸಿದ್ದರು.

ಕಳೆದ 15 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದರು. ವಿಯೆಟ್ನಾಂಜನರ ಶಿಸ್ತು, ಬದ್ಧತೆ ಮತ್ತು ಸಮಯಪಾಲನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದರು.

ಇವನ್ನೂ ಓದಿ

ADVERTISEMENT

ಪುನರ್ಜನ್ಮವಿದ್ದರೆನಾನುವಿಯೆಟ್ನಾಂದೇಶದಲ್ಲಿ ಹುಟ್ಟಲು ಬಯಸುತ್ತೇನೆ ಎಂದು ಹೇಳಿದ್ದರು. ಆಗ ಅವರು ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಎನ್‌ಡಿಎ ಸರ್ಕಾರದಲ್ಲಿ ರಕ್ಷಣ ಸಚಿವರಾಗಿದ್ದರು.

ಆಗ್ನೇಯ ಏಷ್ಯಾದಲ್ಲಿರುವ ವಿಯೆಟ್ನಾಂ ಪ್ರಪಂಚದಲ್ಲೇಹೆಚ್ಚು ಕಾ‍ಫಿ ಉತ್ಪಾದನೆ ಮಾಡುವ ದೇಶವಾಗಿದೆ. ಅಲ್ಲಿನ ಜನರ ಶಿಸ್ತು, ಕೆಲಸದ ವಿಚಾರದಲ್ಲಿ ಅವರು ಯಾವ ತ್ಯಾಗಕ್ಕೂ ಸಿದ್ಧ ಎಂದು ಜಾರ್ಜ್‌ ಫರ್ನಾಂಡಿಸ್‌ ಹೇಳಿದ್ದರು.

ಇವನ್ನೂ ಓದಿ

ಅಮೆರಿಕ, ಚೀನಾ, ಫ್ರಾನ್ಸ್‌ ನಡುವೆ ನಡೆದ ಯುದ್ಧಗಳಲ್ಲಿ ಸುಮಾರು 30 ಲಕ್ಷ ಜನರು ಬಲಿದಾನವಾಗಿದ್ದಾರೆ. ತಲಾ ಆದಾಯದಲ್ಲಿ ವಿಯೆಟ್ನಾಂಭಾರತಕ್ಕಿಂತಲೂ ಮುಂದಿದೆ (15 ವರ್ಷಗಳ ಹಿಂದೆ) ಎಂದು ಫರ್ನಾಂಡಿಸ್‌ ಹೇಳಿದ್ದರು.

ನೂರು ವರ್ಷಗಳ ಭವಿಷ್ಯವನ್ನು ಮುಂದಿಟ್ಟುಕೊಂಡುಒಂದು ದೇಶವನ್ನು ಹೇಗೆ ನಿರ್ಮಾಣಮಾಡಬಹುದು ಎಂಬುದಕ್ಕೆ ವಿಯೆಟ್ನಾಂಮಾದರಿಯ ಉದಾಹರಣೆಯಾಗಿದೆ ಎಂದು ಹಿರಿಯ ಸಮಾಜವಾದಿ ಜಾರ್ಜ್‌ ಫರ್ನಾಂಡಿಸ್‌ ಹೇಳಿದ್ದರು.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.