
ನವದೆಹಲಿ: ರಾಹುಲ್ ಗಾಂಧಿ ಮುಂದಿನ ವಾರ ಜರ್ಮನಿಗೆ ಭೇಟಿ ನೀಡುವ ಕುರಿತು ಟೀಕಿಸಿರುವ ಬಿಜೆಪಿಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ತಿರುಗೇಟು ನೀಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೆಲಸದ ಅರ್ಧದಷ್ಟು ಸಮಯವನ್ನು ದೇಶದ ಹೊರಗಡೆಯೇ ಕಳೆದಿರುವಾಗ ವಿರೋಧ ಪಕ್ಷದ ನಾಯಕನ ಬಗ್ಗೆ ಏಕೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ’ ಎಂದು ಕೇಳಿದ್ದಾರೆ.
‘ರಾಹುಲ್ ಗಾಂಧಿ ಡಿಸೆಂಬರ್ 15ರಿಂದ 20ರವರೆಗೆ ಜರ್ಮನಿಗೆ ಭೇಟಿ ನೀಡಲಿದ್ದು, ಈ ವೇಳೆ ಭಾರತೀಯ ಸಂಜಾತರೊಂದಿಗೆ ಸಂವಾದ ನಡೆಸಲಿದ್ದಾರೆ. ಜರ್ಮನಿಯ ಸಚಿವರನ್ನೂ ಭೇಟಿ ಮಾಡಲಿದ್ದಾರೆ’ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ತಿಳಿಸಿದೆ.
‘ವಿದೇಶ ನಾಯಕ’ ಮತ್ತೊಮ್ಮೆ ವಿದೇಶದ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಸಂಸತ್ತಿನ ಅಧಿವೇಶನ ಡಿಸೆಂಬರ್ 19ರವರೆಗೆ ನಡೆಯಲಿದೆ. ಆದರೆ, ವರದಿಗಳ ಪ್ರಕಾರ ರಾಹುಲ್ ಗಾಂಧಿ ಡಿ.15ರಿಂದ 20ರವರೆಗೆ ಜರ್ಮನಿಗೆ ಭೇಟಿ ನೀಡಲಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಪರ್ಯಟನೆಯ ನಾಯಕ’ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.