ಲಖನೌ:ಪತ್ನಿಯ ಬ್ಯಾಂಕ್ ಖಾತೆ ಪರಿಶೀಲನೆ ಮಾಡುತ್ತಿದ್ದ ರಮೇಶಕುಮಾರ್ ಎನ್ನುವವರಿಗೆ ಆಘಾತ. ತನ್ನ ಪತ್ನಿ ‘ಅಧಿಕೃತವಾಗಿ’ ವಿಧವೆ ! ಏಕೆಂದರೆ, ಅವರ ಖಾತೆಗೆ ಪ್ರತಿ ತಿಂಗಳು ವಿಧವಾ ವೇತನ ಜಮಾ ಆಗುತ್ತಿದೆ!
ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ರಮೇಶ್ ಕೆಲವು ತಿಂಗಳುಗಳ ಹಿಂದಷ್ಟೇ ಮದುವೆಯಾಗಿದ್ದರು. ಆದರೆ, ಮದುವೆಗೂ ಮುನ್ನವೇ ಪತ್ನಿಗೆ ಹಲವು ವರ್ಷಗಳಿಂದ ರಾಜ್ಯಸರ್ಕಾರದಿಂದ ವಿಧವಾ ವೇತನ ಬರುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ, ಈ ಕುರಿತು ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ನೀಡಿರುವ ರಮೇಶ್, ‘ನಾನಿನ್ನೂ ಜೀವಂತವಾಗಿದ್ದೇನೆ. ಬದುಕಿರುವಾಗಲೇ ಪತ್ನಿಗೆ ವಿಧವಾ ವೇತನ ನೀಡುತ್ತಿರುವುದು ಸರಿಯಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಆದರೆ, ರಮೇಶ್ ಒಬ್ಬರಿಗೇ ಈ ಅನುಭವ ಆಗಿದ್ದಲ್ಲ. ಅವರಂತಹ ಇನ್ನೂ ಹಲವು ಪುರುಷರು ಬದುಕಿದ್ದೂ ಹೀಗೆ ಅಧಿಕೃತವಾಗಿ ಸತ್ತುಹೋಗಿದ್ದು ಬೆಳಕಿಗೆ ಬಂದಿದೆ. 20ಕ್ಕೂ ಹೆಚ್ಚು ಮಹಿಳೆಯರು ಹೀಗೆ ಅನಧಿಕೃತವಾಗಿ ವಿಧವಾ ವೇತನ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.