ADVERTISEMENT

ದೆಹಲಿ ಚಲೋ: 29ರಂದು ತೀರ್ಮಾನ

ಪಿಟಿಐ
Published 23 ಫೆಬ್ರುವರಿ 2024, 20:06 IST
Last Updated 23 ಫೆಬ್ರುವರಿ 2024, 20:06 IST
<div class="paragraphs"><p>'ದೆಹಲಿ ಚಲೋ' ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ರೈತ ಮಹಿಳೆಯರು</p></div>

'ದೆಹಲಿ ಚಲೋ' ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ರೈತ ಮಹಿಳೆಯರು

   

ಪಿಟಿಐ ಚಿತ್ರ

ಚಂಡೀಗಢ: ‘ದೆಹಲಿ ಚಲೋ’ ಕರೆಗೆ ಸಂಬಂಧಿಸಿದಂತೆ ಮುಂದಿನ ನಡೆ ಏನಿರಬೇಕು ಎಂಬ ಬಗ್ಗೆ ಗುರುವಾರ (ಫೆ. 29) ತೀರ್ಮಾನ ಕೈಗೊಳ್ಳುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.

ADVERTISEMENT

ಮೇಣದ ಬತ್ತಿ ಹಿಡಿದು ಶನಿವಾರ ಜಾಥಾ ನಡೆಸಲಾಗುವುದು, ಎರಡು ದಿನಗಳ ನಂತರ (ಸೋಮವಾರ) ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ದಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆಗಳು ಶುಕ್ರವಾರ ಸಂಜೆ ಈ ತೀರ್ಮಾನ ಕೈಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.