ADVERTISEMENT

ಬಿಜೆಪಿ, ಅಕಾಲಿ ಬಣದ ಜೊತೆ ಸೇರಿ ಸರ್ಕಾರ ರಚನೆ: ಅಮರಿಂದರ್‌

ಪಿಟಿಐ
Published 29 ನವೆಂಬರ್ 2021, 14:40 IST
Last Updated 29 ನವೆಂಬರ್ 2021, 14:40 IST
ಅಮರಿಂದರ್‌ ಸಿಂಗ್‌
ಅಮರಿಂದರ್‌ ಸಿಂಗ್‌   

ಚಂಡೀಗಡ: ಬಿಜೆಪಿ ಮತ್ತು ಅಕಾಲಿ ಬಣದ ಜೊತೆ ಸೇರಿ ಪಂಜಾಬ್‌ನಲ್ಲಿ ಮುಂದಿನ ಸರ್ಕಾರ ರಚಿಸಲಾಗುವುದು ಎಂದು ‘ಪಂಜಾಬ್‌ ಲೋಕ್‌ ಕಾಂಗ್ರೆಸ್‌’ ಪಕ್ಷದ ಸಂಸ್ಥಾಪಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಸೋಮವಾರ ಹೇಳಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ಅವರನ್ನು ಭೇಟಿಯಾದ ಬಳಿಕ ಅವರು ಈ ವಿಷಯ ತಿಳಿಸಿದರು.

‘ಭೇಟಿಗೆ ಯಾವುದೇ ರಾಜಕೀಯ ಮಹತ್ವ ಇಲ್ಲ, ಖಟ್ಟರ್‌ ಅವರೊಂದಿಗೆ ಒಂದು ಕಪ್‌ ಕಾಫಿ ಕುಡಿದಿದ್ದೇನೆ’ ಎಂದು ಅಮರಿಂದರ್‌ ಪ್ರತಿಕ್ರಿಯಿಸಿದರು.

ADVERTISEMENT

ವಿಧಾನಸಭಾ ಚುನಾವಣೆಗೆ ಮೊದಲು ‘ಪಂಜಾಬ್‌ ಲೋಕ್‌ ಕಾಂಗ್ರೆಸ್‌’ಗೆ ಪ್ರಮುಖರು ಸೇರ್ಪಡೆಗೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸ್ವಲ್ಪ ಕಾಯಿರಿ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಪಕ್ಷದ ಸದಸ್ಯತ್ವ ಅಭಿಯಾನವು ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆ’ ಎಂದರು.

‘ಬಿಜೆಪಿ ಹಾಗೂ ಸುಖದೇವ್‌ ಸಿಂಗ್‌ ಧಿಂಡ್ಸಾ ಅವರ ಪಕ್ಷದ (ಎಸ್‌ಎಡಿ ಸಂಯುಕ್ತ) ಜೊತೆ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಮಾಡಿಕೊಳ್ಳಲಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.