ADVERTISEMENT

ಇನ್ನು ಮುಂದೆ ಆರ್‌ಎಸ್‌ಎಸ್ ಅನ್ನು ‘ಸಂಘಪರಿವಾರ‘ ಎಂದು ಕರೆಯಲ್ಲ: ರಾಹುಲ್ ಗಾಂಧಿ

ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 9:05 IST
Last Updated 25 ಮಾರ್ಚ್ 2021, 9:05 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ‘ಇನ್ನು ಮುಂದೆ ಆರ್‌ಎಸ್‌ಎಸ್‌ ಮತ್ತು ಆ ಸಂಘಟನೆಗೆ ಸೇರಿದ ಗುಂಪುಗಳನ್ನು ‘ಸಂಘ ಪರಿವಾರ‘ ಎಂದು ಕರೆಯುವುದು ಸೂಕ್ತವಲ್ಲ‘ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ರಾಹುಲ್‌, ‘ಒಂದು ಪರಿವಾರ ಅಥವಾ ಕುಟುಂಬ ಎಂದರೆ, ಅದರಲ್ಲಿ ಮಹಿಳೆಯರಿರುತ್ತಾರೆ. ಗೌರವಾನ್ವಿತ ಹಿರಿಯರ ಜತೆಗೆ, ಸಹಾನುಭೂತಿ ಮತ್ತು ವಾತ್ಸಲ್ಯದ ಭಾವನೆಯನ್ನು ಒಳಗೊಂಡ ವಾತಾವರಣವಿರುತ್ತದೆ. ಆದರೆ ಆರ್‌ಎಸ್‌ಎಸ್‌ ಮತ್ತು ಅದರ ಜತೆಗಿರುವ ಸಂಘಟನೆಗಳ ಗುಂಪಿನಲ್ಲಿ ಇಂಥ ಯಾವುದೇ ವಾತಾವರಣ ಇಲ್ಲ‘ ಎಂದು ಉಲ್ಲೇಖಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯೊಬ್ಬರಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ‘ಇದು ಸಂಘಪರಿವಾರದವರು ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಿ, ಅಲ್ಪಸಂಖ್ಯಾತರನ್ನು ಮಟ್ಟ ಹಾಕಲು ಮಾಡಿದ ಕೆಟ್ಟ ಪ್ರಚಾರದ ಪರಿಣಾಮ‘ ಎಂದು ಪ್ರತಿಕ್ರಿಯಿಸಿದ್ದರು. ಇದಾದ ಒಂದು ದಿನದ ನಂತರ, ಅವರು ಈ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಇನ್ನು ಮುಂದೆನಾನು ಆರ್‌ಎಸ್‌ಎಸ್ ಮತ್ತು ಅದರ ಸಂಘಟನೆಗಳನ್ನು ಸಂಘಪರಿವಾರ ಎಂಬುದಾಗಿ ಕರೆಯುವುದಿಲ್ಲ‘ ಎಂದು ಟ್ವೀಟ್‌ ಮಾಡಿದ್ದಾರೆ.

https://twitter.com/RahulGandhi/status/1374943539285565443

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.