ADVERTISEMENT

ದೆಹಲಿಯಲ್ಲಿ ಕೊರೊನಾಗೆ 380 ಮಂದಿ ಸಾವು, ಶೇ 35ಕ್ಕೂ ಹೆಚ್ಚು ಪಾಸಿಟಿವಿಟಿ ದರ

ಪಿಟಿಐ
Published 27 ಏಪ್ರಿಲ್ 2021, 3:15 IST
Last Updated 27 ಏಪ್ರಿಲ್ 2021, 3:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆಮ್ಲಜನಕದ ಬಿಕ್ಕಟ್ಟಿನ ನಡುವೆ ದೆಹಲಿಯಲ್ಲಿ ಸೋಮವಾರ ಕೋವಿಡ್‌ನಿಂದ 380 ಜನರು ಸಾವಿಗೀಡಾಗಿದ್ದಾರೆ. ಇದು ಅತ್ಯಂತ ಗರಿಷ್ಠ ಪ್ರಮಾಣವಾಗಿದೆ. ಈ ಮಧ್ಯೆ ಪಾಸಿಟಿವಿಟಿ ಪ್ರಮಾಣವು ಶೇ 35ಕ್ಕಿಂತ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ತಿಳಿಸಿದೆ.

ಕೊರೊನಾ ವೈರಸ್‌ನಿಂದಾಗಿ ಸತತ ಐದನೇ ದಿನ 300ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾನುವಾರ 350 ಜನರು ಸಾವಿಗೀಡಾಗಿದ್ದರೆ, ಸೋಮವಾರ 380 ಸಾವುಗಳು ವರದಿಯಾಗಿವೆ. ಇದು ಒಂದು ವರ್ಷದ ಹಿಂದೆ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ವರದಿಯಾದ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ 22,933, ಶನಿವಾರ 24,103, ಶುಕ್ರವಾರ 24,331, ಗುರುವಾರ 26,169, ಮತ್ತು ಬುಧವಾರ 24,638 ಸೋಂಕು ಪ್ರಕರಣಗಳು ದಾಖಲಾಗಿವೆ.

ADVERTISEMENT

ರಾಜಧಾನಿಯು 20,201ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದ್ದು, ಹಿಂದಿನ ದಿನ ನಡೆಸಿದ ಪರೀಕ್ಷೆಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದೆ. ಈ ಅವಧಿಯಲ್ಲಿ 18,000 ಕ್ಕಿಂತ ಹೆಚ್ಚು ರ‍್ಯಾಪಿಡ್-ಆಂಟಿಜೆನ್ ಪರೀಕ್ಷೆಗಳು ಸೇರಿದಂತೆ ಒಟ್ಟು 57,690 ಜನರಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ತಿಂಗಳಲ್ಲಿ ನಡೆಸಿದ ಕಡಿಮೆ ಪರೀಕ್ಷೆ ಇದು ಎಂದು ಅದು ಹೇಳಿದೆ.

ಹೊಸ ಪ್ರಕರಣಗಳೊಂದಿಗೆ ರಾಷ್ಟ್ರ ರಾಜಧಾನಿಯ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 10,47,916ಕ್ಕೆ ಏರಿಕೆಯಾಗಿದೆ ಮತ್ತು ಮೃತರ ಸಂಖ್ಯೆ 14,628 ರಷ್ಟಿದೆ. ಸಕಾರಾತ್ಮಕ ದರವು ಶೇ 35.02 ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 92,358 ಇದೆ ಎಂದು ಬುಲೆಟಿನ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.