ADVERTISEMENT

ಮದುವೆಯಾಗುವುದಾಗಿ ಹೇಳಿ ಅತ್ಯಾಚಾರ ನಡೆಸಿದ ಆರೋಪ: ಸುಪ್ರೀಂ ಮೆಟ್ಟಿಲೇರಿದ DYSP

ಪಿಟಿಐ
Published 18 ಜನವರಿ 2025, 13:34 IST
Last Updated 18 ಜನವರಿ 2025, 13:34 IST
.
.   

ನವದೆಹಲಿ: ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಐಪಿಎಸ್‌ ಅಧಿಕಾರಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ರದ್ದು ಮಾಡಿದ ಪಟ್ನಾ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಬಿಹಾರದ ಮಹಿಳಾ ಉಪ ಪೊಲೀಸ್‌ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ನ್ಯಾಯಮೂರ್ತಿಗಳಾದ ಪಂಕಜ್‌ ಮಿಥಲ್‌ ಮತ್ತು ಅಹಸಾನುದ್ದೀನ್‌ ಅಮಾನುಲ್ಲಾಹ್ ಅವರು ಸೋಮವಾರ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಹೈಕೋರ್ಟ್‌ 2024ರ, ಸೆಪ್ಟೆಂಬರ್‌ 19ರಂದು ನೀಡಿದ ತೀರ್ಪು, ಪ್ರಕರಣದ ವಾಸ್ತವಾಂಶಗಳಿಗೆ ಮತ್ತು ಸ್ಥಾಪಿತ ಕಾನೂನಿಗೆ ವಿರುದ್ಧವಾಗಿದೆ ಎಂದು ಡಿವೈಎಸ್‌ಪಿ ಪರ ವಕೀಲರು ತಿಳಿದ್ದಾರೆ.

ADVERTISEMENT

 ಮಹಿಳಾ ಅಧಿಕಾರಿ ನೀಡಿದ ದೂರಿನ ಅನ್ವಯ ಐಪಿಎಸ್ ಅಧಿಕಾರಿ ಪುಷ್ಕರ್‌ ಆನಂದ್‌ ಮತ್ತು ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.