ADVERTISEMENT

ಹೆಂಡತಿಗೆ ತಲಾಖ್ ನೀಡಿದ್ದಲ್ಲದೇ ಅಶ್ಲೀಲ ವಿಡಿಯೊ ಮಾಡಿ ಎಫ್‌ಬಿಗೆ ಹರಿಬಿಟ್ಟ ಭೂಪ!

ಉತ್ತರ ಪ್ರದೇಶದಲ್ಲಿ ಘಟನೆ

ಪಿಟಿಐ
Published 29 ಆಗಸ್ಟ್ 2021, 5:52 IST
Last Updated 29 ಆಗಸ್ಟ್ 2021, 5:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಜಾಫರ್‌ನಗರ: ತನ್ನ ಗಂಡನೇ ನನ್ನ ಅಶ್ಲೀಲ ವಿಡಿಯೊ ಮಾಡಿ ಫೇಸ್‌ಬುಕ್‌ನಲ್ಲಿಹರಿದಾಡಿಸಿದ್ದಾನೆ ಎಂದುಮನನೊಂದ 25 ವರ್ಷದ ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಮುಜಾಫರ್‌ನಗರ ಜಿಲ್ಲೆಯ ಕೃಷ್ಣನಗರ ಎಂಬಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ.

‘ಈ ದಂಪತಿಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. 18 ತಿಂಗಳ ಮಗು ಇದೆ‘ ಎಂದು ಪೊಲೀಸ್ ಅಧಿಕಾರಿ ದೀಪಕ್ ಚತುರ್ವೇದಿ ತಿಳಿಸಿದ್ದಾರೆ.

‘ಆರೋಪಿಮಹಿಳೆಗೆ ಕಳೆದ ಮೂರು ತಿಂಗಳ ಹಿಂದೆ ತ್ರಿವಳಿ ತಲಾಖ್ ನೀಡುವ ಮೂಲಕ ವಿಚ್ಚೇದನ ನೀಡಿದ್ದನು. ಅದಾಗ್ಯೂ ಮಹಿಳೆಗೆ ಕಿರುಕುಳ ನೀಡುವುದನ್ನು ಮುಂದುವರೆಸಿದ್ದ ಆರೋಪಿ, ಅವಳ ಅಶ್ಲೀಲ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು. ಇದರಿಂದ ನೊಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ‘ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ಕುರಿತುಮುಜಾಫರ್‌ನಗರದ ಭೋಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.