ADVERTISEMENT

ತಂದೆಯ ಸಾವಿನ ದುಃಖದ ಮಧ್ಯೆ ಪಥಸಂಚಲನದಲ್ಲಿ ಭಾಗಿಯಾದ ಮಹಿಳಾ ಅಧಿಕಾರಿಗೆ ಪ್ರಶಂಸೆ

ಪಿಟಿಐ
Published 16 ಆಗಸ್ಟ್ 2020, 9:31 IST
Last Updated 16 ಆಗಸ್ಟ್ 2020, 9:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುನೆಲ್ವೇಲಿ: ಇಲ್ಲಿನ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ತಂದೆ ಮೃತಪಟ್ಟಿದ್ದರೂ, ಸ್ವಾತಂತ್ರ್ಯ ದಿನಾಚರಣೆಯ ಪಥಸಂಚಲನದಲ್ಲಿ ಪಾಲ್ಗೊಂಡು ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.

ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಅಧಿಕಾರಿ ಎನ್‌.ಮಹೇಶ್ವರಿ ಎಂಬುವವರು ದುಃಖದ ಸಮಯದಲ್ಲಿಯೂ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ. ಜಿಲ್ಲೆಯಪಲಯಂಕೊಟ್ಟೈನ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಪಥಸಂಚಲನದ ನೇತೃತ್ವವನ್ನು ಅವರು ವಹಿಸಿದ್ದರು.

‘ಮಹೇಶ್ವರಿ ಅವರ ತಂದೆ ನಾರಾಯಣ ಸ್ವಾಮಿ (83) ಅವರು ಆ.14 ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದರು. ಆದರೆ ಮಹೇಶ್ವರಿ ಅವರು ಮರುದಿನ ಬೆಳಿಗ್ಗೆ ಸ್ವಾತಂತ್ರ್ಯ ದಿನಾಚರಣೆಯ ಪಥಸಚಲನದಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಮುಗಿದ ಬಳಿಕ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಮಹೇಶ್ವರಿಅವರು ತನ್ನ ದುಃಖವನ್ನು ಬದಿಗಿಟ್ಟು ಕರ್ತವ್ಯವನ್ನು ನಿಭಾಯಿಸಿದರು. ಇಂತಹ ಅಧಿಕಾರಿ ನಮ್ಮ ಇಲಾಖೆಯಲ್ಲಿರುವುದು ಹೆಮ್ಮೆಯ ವಿಷಯ’ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.