ADVERTISEMENT

ಮಗನ ಹುಟ್ಟುಹಬ್ಬದಲ್ಲಿ ಪಿಸ್ತೂಲ್‌ನಿಂದ ಸಂಭ್ರಮಾಚರಣೆ: ಗುಂಡು ಸಿಡಿದು ತಾಯಿ ಸಾವು

ಪಿಟಿಐ
Published 23 ಡಿಸೆಂಬರ್ 2021, 6:40 IST
Last Updated 23 ಡಿಸೆಂಬರ್ 2021, 6:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖಿಂಪುರ್ ಖೇರಿ: ತನ್ನ ಮಗನ ಹುಟ್ಟುಹಬ್ಬವನ್ನು ಆಚರಣೆ ಮಾಡುವಾಗ ಆಕಸ್ಮಿಕವಾಗಿ ಸಿಡಿದ ಗುಂಡಿಗೆ ತಾಯಿ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದಲಖಿಂಪುರ್ ಖೇರಿಯಲ್ಲಿ ಮಂಗಳವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

ಅನಿತಾ ವರ್ಮಾ (28) ಮೃತಪಟ್ಟವರು.

ಪ್ರದೀಪ್ ವರ್ಮಾ ಎನ್ನುವ ರೈತರೊಬ್ಬರ ಪತ್ನಿಯಾಗಿರುವ ಅನಿತಾ ವರ್ಮಾ ತಮ್ಮ ಮಗನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಮನೆಯಲ್ಲಿ ಅದ್ಧೂರಿಯಾಗಿ ಆಯೋಜಿಸಿದ್ದರು. 100 ಕ್ಕೂ ಹೆಚ್ಚು ಸ್ನೇಹಿತರು, ಸಂಬಂಧಿಗಳು ಉಪಸ್ಥಿತರಿದ್ದರು.

ADVERTISEMENT

ಈ ವೇಳೆ ಕೆಲ ಅನಿತಾ ಸಂಬಂಧಿಗಳು ಸಂಭ್ರಮಾಚರಣೆ ಮಾಡುವ ಭರದಲ್ಲಿ ಪಿಸ್ತೂಲ್‌ನಿಂದ ಸಿಡಿಸಿದ ಗುಂಡು ಅನಿತಾ ಅವರ ಪ್ರಾಣಕ್ಕೆ ಕಂಟಕವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಜೈರಾಂ ವರ್ಮಾ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.