ADVERTISEMENT

ಪ್ರೇಮಿ ಜತೆ ಸೇರಿ ಗಂಡನ ಕೊಲೆ: ಹಾವು ಕಚ್ಚಿ ಸಾವು ಎಂದು ಬಿಂಬಿಸಿದ ಪತ್ನಿ

ಪಿಟಿಐ
Published 17 ಏಪ್ರಿಲ್ 2025, 13:39 IST
Last Updated 17 ಏಪ್ರಿಲ್ 2025, 13:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೇರಠ್: ಪ್ರಿಯಮನ ಜೊತೆಗೂಡಿ ತನ್ನ ಗಂಡನನ್ನು ಹತ್ಯೆ ಮಾಡಿದ ಮಹಿಳೆ ಬಳಿಕ ಹಾವು ಕಚ್ಚಿ ಗಂಡ ಮೃತಪಟ್ಟಿದ್ದಾನೆ ಎಂಬಂತೆ ಬಿಂಬಿಸಲು ವಿಷಕಾರಿ ಹಾವನ್ನು ಹೆಣದ ಮುಂದೆ ಹಾಕಿದ್ದಳು ಎಂದು ಉತ್ತರ ಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ. 

ಸಾವಿಗೀಡಾದ ವ್ಯಕ್ತಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ವಿಚಾರವು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದ್ದು, ಈ ಕೃತ್ಯವೆಸಗಿದ ಆರೋಪಿಗಳಾದ ಮಹಿಳೆ ರವಿತಾ (30) ಹಾಗೂ ಆಕೆಯ ಪ್ರಿಯತಮ ಅಮರ್‌ದೀಪ್ (20)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಮೇರಠ್ ಜಿಲ್ಲೆಯ ಅಕ್ಬರ್‌ಪುರ ಸದಾತ್ ಗ್ರಾಮದಲ್ಲಿ ಅಮಿತ್ ಕಶ್ಯಪ್ ಅಲಿಯಾಸ್ ಮಿಕ್ಕಿ (30) ಅವರ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿತ್ತು. ವಿಷಕಾರಿ ಹಾವು ಸಹ ಮಿಕ್ಕಿ ಮಲಗುವ ಸ್ಥಳದಲ್ಲಿ ಪತ್ತೆಯಾಗಿತ್ತು. ಹೀಗಾಗಿ, ಹಾವು ಕಚ್ಚಿ ವ್ಯಕ್ತಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಕತ್ತು ಹಿಸುಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ. ಹೀಗಾಗಿ, ಆರೋಪಿಗಳಾದ ರವಿತಾ ಮತ್ತು ಅಮರ್‌ದೀಪ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.