ADVERTISEMENT

ಗುಜರಾತ್‌: ವಂದೇ ಭಾರತ್‌ ರೈಲು ಹರಿದು ಮಹಿಳೆ ಸಾವು

ಪಿಟಿಐ
Published 8 ನವೆಂಬರ್ 2022, 14:31 IST
Last Updated 8 ನವೆಂಬರ್ 2022, 14:31 IST
ವಂದೇ ಭಾರತ್‌ ರೈಲು
ವಂದೇ ಭಾರತ್‌ ರೈಲು   

ಆನಂದ್‌, ಗುಜರಾತ್‌: ಗುಜರಾತ್‌ನ ಆನಂದ್ ರೈಲು ನಿಲ್ದಾಣದ ಬಳಿ ಮಂಗಳವಾರ ಸಂಜೆ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ 54 ವರ್ಷದ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

‘ಮೃತ ಮಹಿಳೆಯನ್ನು ಅಹಮದಾಬಾದ್‌ ನಿವಾಸಿ ಬೆಯತ್ರಿಸ್‌ ಆರ್ಚಿಬಾಲ್ಡ್ ಪೀಟರ್ ಎಂದು ಗುರುತಿಸಲಾಗಿದೆ. ಆನಂದ್‌ನಲ್ಲಿರುವ ಸಂಬಂಧಿಕರ ಮನೆಗೆ ಹೋಗಲು ಮಹಿಳೆ ಹಳಿ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಾಂಧಿನಗರ ನಿಲ್ದಾಣದಿಂದ ಮುಂಬೈ ಸೆಂಟ್ರಲ್‌ಗೆ ತೆರಳುತ್ತಿದ್ದ ರೈಲಿಗೆ ಆನಂದ್‌ನಲ್ಲಿ ನಿಲುಗಡೆ ಅವಕಾಶ ಇರಲಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT