ADVERTISEMENT

ಕುಟುಂಬದಿಂದ ಬೇರ್ಪಟ್ಟ ಮಹಿಳೆ: ಮತ್ತೆ ಒಂದಾಗಲು ಸಹಾಯ ಮಾಡಿದ ಗೂಗಲ್‌ ಟ್ರಾನ್ಸ್‌ಲೇಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮೇ 2023, 7:55 IST
Last Updated 11 ಮೇ 2023, 7:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರುದ್ರಪ್ರಯಾಗ: ಆಂಧ್ರಪ್ರದೇಶದ 68 ವರ್ಷದ ಮಹಿಳೆಯೊಬ್ಬರು ಕೇದಾರನಾಥದಿಂದ ವಾಪಸಾಗುತ್ತಿದ್ದ ವೇಳೆ ಹವಾಮಾನ ವೈಪರೀತ್ಯದಿಂದಾಗಿ ತನ್ನ ಕುಟುಂಬದಿಂದ ಬೇರ್ಪಟ್ಟಿದ್ದು, ಗೂಗಲ್‌ ಟ್ರಾನ್ಸ್‌ಲೇಟ್‌ ಸಹಾಯದಿಂದಾಗಿ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗಿದ್ದಾರೆ.

ಮಂಗಳವಾರ ರಾತ್ರಿ ಗೌರಿಕುಂಡ್‌ ಶಟಲ್‌ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಯನ್ನು ಗೊಂದಲದ ಸ್ಥಿತಿಯಲ್ಲಿ ನೋಡಿದ ಸ್ಥಳೀಯ ಪೊಲೀಸರು ವಿಚಾರಿಸಿದ್ದಾರೆ. ವಯಸ್ಸಾದ ಮಹಿಳೆಯೂ ತೆಲುಗು ಮಾತನಾಡುತ್ತಿದ್ದರಿಂದ ಪೊಲೀಸ್‌ ಸಿಬ್ಬಂದಿಯೊಂದಿಗೆ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಸಂವಹನ ನಡೆಸಲು ಸಾಧ್ಯವಾಗಲಿಲ್ಲ.

‘ನಾವು ಅವಳೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ, ಅವಳು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಸಂವಹನ ಮಾಡಲು ಸಾಧ್ಯವಿಲ್ಲ ಎಂದು ನಾವು ಅರಿತುಕೊಂಡೆವು. ಅವಳು ತೆಲುಗು ಮಾತ್ರ ಮಾತನಾಡುತ್ತಿದ್ದಳು’ ಎಂದು ಸಬ್ ಇನ್ಸ್‌ಪೆಕ್ಟರ್ ರಮೇಶ್ ಚಂದ್ರ ಬೆಲ್ವಾಲ್ ಹೇಳಿದರು.

ADVERTISEMENT

ಉತ್ತರಾಖಂಡ್‌ನಲ್ಲಿ ತನ್ನ ಕುಟುಂಬದಿಂದ ತಾನು ಬೇರ್ಪಟ್ಟಿರುವುದಾಗಿ ಮಹಿಳೆಯೂ ಸನ್ನೆಗಳ ಮೂಲಕ ನಮಗೆ ತಿಳಿಸಿದ್ದು, ಅವಳನ್ನು ಮತ್ತೆ ತನ್ನ ಕುಟುಂಬದೊಂದಿಗೆ ಸೇರಿಸುವುದಾಗಿ ಭರವಸೆ ನೀಡಿದೆವು.

ಅವರು ನಮಗೆ ಹೇಳಲು ಪ್ರಯತ್ನಿಸುತ್ತಿರುವುದನ್ನು ಅರ್ಥೈಸಿಕೊಳ್ಳಲು ಗೂಗಲ್ ಟ್ರಾನ್ಸ್‌ಲೇಟ್‌ ಸಹಾಯವನ್ನು ಪಡೆದುಕೊಂಡೆವು, ಆಕೆ ನೀಡಿದ ನಂಬರ್‌ಗೆ ಡಯಲ್‌ ಮಾಡಿದಾಗ ಆಕೆಯ ಸಂಬಂಧಿಕರು ಸೋನ್‌ಪ್ರಯಾಗದಲ್ಲಿದ್ದು, ಆಕೆಯ ಬಗ್ಗೆ ಚಿಂತಿತರಾಗಿರುವುದು ತಿಳಿದುಬಂತು ಎಂದು ಪೊಲೀಸರು ತಿಳಿಸಿದರು.

ನಂತರ ವಾಹನವನ್ನು ವ್ಯವಸ್ಥೆಗೊಳಿಸಿ ಮಹಿಳೆಯನ್ನು ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಸಲು ಸೋನ್‌ಪ್ರಯಾಗಕ್ಕೆ ಕರೆದೊಯ್ಯಲಾಯಿತು. ಕುಟುಂಬದಿಂದ ಬೇರ್ಪಟ್ಟ ಮಹಿಳೆಯೂ ಮತ್ತೆ ಒಂದಾಗಲು ಗೂಗಲ್‌ ಟ್ರಾನ್ಸ್‌ಲೇಟ್‌ ಸಹಾಯ ಮಾಡಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.