ADVERTISEMENT

ಸುಳ್ಳು ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆ ಬಂಧನ

ಪಿಟಿಐ
Published 17 ಜೂನ್ 2019, 19:23 IST
Last Updated 17 ಜೂನ್ 2019, 19:23 IST

ಮುಂಬೈ: ನಟ ಕರಣ್ ಒಬೆರಾಯ್ ವಿರುದ್ಧ ಸುಳ್ಳು ಆರೋಪ ಮಾಡಿದ್ದ 34 ವರ್ಷದ ಮಹಿಳೆಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಕರಣ್ತನ್ನ ಮೇಲೆ ಅತ್ಯಾಚಾರ ಹಾಗೂ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು.

ಕಳೆದ ತಿಂಗಳು 25ರಂದು ತಾನು ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದಾಳಿ ನಡೆಸಿದರು ಎಂದು ಮಹಿಳೆ ಮತ್ತೊಂದು ದೂರು ದಾಖಲಿಸಿದ್ದರು.

ಆದರೆ ಇದು ಸುಳ್ಳು ದಾಳಿ ಎಂದು ತಿಳಿದುಬಂದ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇದಕ್ಕೂ ಮೊದಲು ಅವರ ವಕೀಲರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ಮಹಿಳೆ ನೀಡಿದ ದೂರಿನ ಅನ್ವಯ ಒಬೆರಾಯ್ ಅವರನ್ನು ಪೊಲೀಸರುಬಂಧಿಸಿದ್ದರು. ಬಳಿಕ ಬಾಂಬೆ ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆ.

‘ಇದು ನಕಲಿ ದಾಳಿಯಾಗಿದ್ದು, ಸ್ವತಃ ಮಹಿಳೆಯೇ ತನ್ನ ಮೇಲೆ ಇಂತಹ ದಾಳಿ ನಡೆಯುವಂತೆ ಯೋಜನೆ ರೂಪಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ದೂರು ನೀಡಿದ್ದಕ್ಕಾಗಿಯೇ ತನ್ನ ಮೇಲೆ ದಾಳಿಯಾಗಿದೆ ಎಂದು ತೋರಿಸುವುದು ಅವರ ಉದ್ದೇಶವಾಗಿತ್ತು’ ಎಂದು ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಈ ವೇಳೆ ಹೇಳಿದೆ. ‘ಪೊಲೀಸರು ವಿಚಾರಣೆ ನಡೆಸಿದ ರೀತಿ ಸರಿಯಾಗಿಲ್ಲ. ನ್ಯಾಯಯುತ ತನಿಖೆಯಾಗಬೇಕು’ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.