ಲಖನೌ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಎರಡು ತಿಂಗಳಿನಿಂದ ಹೋರಾಟ ಮಾಡುತ್ತಿರುವ ಮಹಿಳಾ ಪ್ರತಿಭಟನಕಾರರು ಇಲ್ಲಿನ ಐತಿಹಾಸಿಕ ಗಡಿಯಾರ ಗೋಪುರದ ಮುಂದೆಯೇ ತಾತ್ಕಾಲಿಕವಾಗಿ ಜೈಲನ್ನು ನಿರ್ಮಿಸಿಕೊಂಡಿದ್ದಾರೆ. ಅಲ್ಲಿ ತಮ್ಮನ್ನು ತಾವೇ ಬಂಧಿಸಿಕೊಂಡು ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸುತ್ತಿದ್ಧಾರೆ.
ಈ ಸಾಂಕೇತಿಕ ಜೈಲನ್ನು ಮರದಿಂದ ಮಾಡಲಾಗಿದ್ದು, ಎರಡು ಕಡೆಗಳಿಂದ ಬಟ್ಟೆಯಿಂದ ಮುಚ್ಚಲಾಗಿದೆ. ‘ಬಂಧನ ಕೇಂದ್ರ’ ಎನ್ನುವ ನಾಮಫಲಕವನ್ನೂ ಅಲ್ಲಿ ಅಳವಡಿಸಲಾಗಿದೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ತಾತ್ಕಾಲಿಕ ಜೈಲಿನ ಮಾದರಿಯನ್ನು ತೆರವು ಮಾಡಿದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.