ADVERTISEMENT

‘ಪಕ್ಷಗಳಲ್ಲಿ ಮಹಿಳಾ ಪ್ರಾತಿನಿಧ್ಯ ನೀಡಲಿ’: ಸಂಸದೀಯ ಸಮಿತಿ

ಒಂದು ದೇಶ– ಒಂದು ಚುನಾವಣೆ– ತಜ್ಞರಿಂದ ಸಲಹೆಗಳ ಸಲ್ಲಿಕೆ

ಪಿಟಿಐ
Published 12 ಆಗಸ್ಟ್ 2025, 15:48 IST
Last Updated 12 ಆಗಸ್ಟ್ 2025, 15:48 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ನವದೆಹಲಿ: ‘ರಾಜಕೀಯ ಪಕ್ಷಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಹಾಗೂ ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಮೇಲುಸ್ತುವಾರಿಯಲ್ಲಿ ಚುನಾವಣಾ ಆಯೋಗವು ಪಾತ್ರ ವಹಿಸಬೇಕು’ ಎಂದು ಒಂದು ದೇಶ– ಒಂದು ಚುನಾವಣೆ ಸಂಸದೀಯ ಸಮಿತಿಯ ಮುಂದೆ ತಜ್ಞರು ಸಲಹೆಗಳನ್ನು ನೀಡಿದ್ದಾರೆ.

ಏಕಕಾಲಕ್ಕೆ ಚುನಾವಣೆ ನಡೆಸುವ ಪರಿಕಲ್ಪನೆಗೆ ಬಿಜೆಪಿ ಮಾಜಿ ಸಂಸದ ವಿನಯ್‌ ಸಹಸ್ರಬುದ್ಧೆ ನೇತೃತ್ವದ ತಜ್ಞರ ಸಮಿತಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಕ್ರಿಯೆಯು ‘ಎಲ್ಲ ಸುಧಾರಣೆಗಳ ತಾಯಿ’ ಎಂದು ಬಣ್ಣಿಸಿದ್ದು, ಪ್ರಜಾತಾಂತ್ರಿಕ ಸುಧಾರಣೆಯೂ ಇನ್ನಷ್ಟು ಅಗತ್ಯವಿದೆ ಎಂದು ತಿಳಿಸಿದೆ. 

‘ಎಲ್ಲ ರಾಜಕೀಯ ಪಕ್ಷಗಳು ಪಕ್ಷದ ಸಂಘಟನೆಗಳಲ್ಲಿಯೂ ಪ್ರಾತಿನಿಧ್ಯ ನೀಡಬೇಕು. ಮುಂದಿನ ದಿನಗಳಲ್ಲಿ ಲೋಕಸಭೆ, ವಿಧಾನಸಭೆಯಲ್ಲಿ ಜಾರಿಯಾಗಲಿರುವ ಮಹಿಳಾ ಮೀಸಲಾತಿಯನ್ನು ಪಡೆಯಲು ಈಗಿನಿಂದಲೇ ಸಿದ್ಧತೆ ನಡೆಸುವುದು ಅಗತ್ಯವಾಗಿದೆ’ ಎಂದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.