ADVERTISEMENT

ನಾಗರಿಕ ಸೇವಾ ಪರೀಕ್ಷೆ: ಮಹಿಳೆಯರ ಪ್ರಮಾಣ ಹೆಚ್ಚಳ

ಪಿಟಿಐ
Published 10 ಡಿಸೆಂಬರ್ 2025, 16:24 IST
Last Updated 10 ಡಿಸೆಂಬರ್ 2025, 16:24 IST
..
..   

ನವದೆಹಲಿ: ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹರಾಗುವ ಮಹಿಳೆಯರ ಪ್ರಮಾಣವು 2019ರಲ್ಲಿ ಶೇ 24ರಷ್ಟಿತ್ತು, 2023ರಲ್ಲಿ ಶೇ 35‌ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

ನಾಗರಿಕ ಸೇವೆಗೆ ಅರ್ಹತೆ ಪಡೆಯುವವರಲ್ಲಿ ಶೇ 50ಕ್ಕಿಂತಲೂ ಅಧಿಕ ಮಂದಿ ಎಂಜಿನೀಯರಿಗಳಿರುತ್ತಾರೆ ಎಂದು ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ವ್ಯವಹಾರಗಳ ಖಾತೆಯ ರಾಜ್ಯಸಚಿವ ಜಿತೇಂದ್ರ ಸಿಂಗ್‌ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

‘ಅಂತಿಮ ಆಯ್ಕೆ ಪಟ್ಟಿಯಲ್ಲಿನ ಹೆಸರುಗಳಲ್ಲಿ ಮಹಿಳೆಯರ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2023ನೇ ಸಾಲಿನಲ್ಲಿ 554 ಎಂಜಿನಿಯರ್‌ಗಳು ಅರ್ಹರಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT