ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಜನರಿಗೆ ರೇಡಿಯೊ ಕಾಲಾತೀತವಾದ ಜೀವನಾಡಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ವಿಶ್ವ ರೇಡಿಯೊ ದಿನವಾದ ಇಂದು (ಫೆ.13) ರೇಡಿಯೊ ಪ್ರೀಯರಿಗೆ ಶುಭಾಶಯ ಕೋರಿ ಸಾಮಾಜಿಕ ಮಾಧ್ಯಮದಲ್ಲಿ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ಸುದ್ದಿ ಮತ್ತು ಸಂಸ್ಕೃತಿಯಿಂದ ಹಿಡಿದು ಸಂಗೀತ ಮತ್ತು ಕಥೆ ಹೇಳುವ ಸೃಜನಶೀಲ ಮಾಧ್ಯಮವಾಗಿದೆ. ಈ ರೇಡಿಯೊ ಜಗತ್ತಿಗೆ ಸಂಬಂಧಿಸಿದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.
ಫೆ.23ರಂದು ಮನ್‌ಕೀ ಬಾತ್‌ನಲ್ಲಿ ಭೇಟಿಯಾಗೋಣ ಎಂದು ಮೋದಿ ಹೇಳಿದ್ದಾರೆ.
ಪ್ರತಿ ವರ್ಷ ಫೆಬ್ರವರಿ 13ರಂದು, ರೇಡಿಯೊ ಮಹತ್ವದ ಬಗ್ಗೆ ಜನ ಜಾಗೃತಿ ಮೂಡಿಸಲು ಮತ್ತು ರೇಡಿಯೊ ಮೂಲಕ ಮಾಹಿತಿ- ಪ್ರಸಾರವನ್ನು ಉತ್ತೇಜಿಸಲು, ವಿಶ್ವ ರೇಡಿಯೋ ದಿನ ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.