ADVERTISEMENT

ಲಡಾಖ್‌: 18,600 ಅಡಿ ಎತ್ತರದಲ್ಲಿ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ ಲೋಕಾರ್ಪಣೆ

ಪಿಟಿಐ
Published 31 ಆಗಸ್ಟ್ 2021, 15:19 IST
Last Updated 31 ಆಗಸ್ಟ್ 2021, 15:19 IST
ಆಕಾಶವಾಣಿ ಟ್ವಿಟರ್ ಖಾತೆಯ ಚಿತ್ರ
ಆಕಾಶವಾಣಿ ಟ್ವಿಟರ್ ಖಾತೆಯ ಚಿತ್ರ   

ಲಡಾಕ್: ಲೆಹ್‌ನಿಂದ ಪ್ಯಾಂಗೊಂಗ್ ಸರೋವರಕ್ಕೆ ಸಂಪರ್ಕ ಕಲ್ಪಿಸುವ ಕಾರ್ಯತಂತ್ರದ ಮಹತ್ವದ ರಸ್ತೆಯನ್ನು ಲಡಾಖ್ ಸಂಸದ ಜಮ್ಯಾಂಗ್ ಸೆರಿಂಗ್ ನಮಗ್ಯಾಲ್ ಅವರು ಮಂಗಳವಾರ ಉದ್ಘಾಟಿಸಿದರು.18,600 ಅಡಿ ಎತ್ತರದಲ್ಲಿ ಹಾದು ಹೋಗುವ ಈ ಮಾರ್ಗವು ವಿಶ್ವದ ಅತಿ ಎತ್ತರದ ಮೋಟಾರು ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಸೇನೆಯ 58 ಎಂಜಿನಿಯರ್ ರೆಜಿಮೆಂಟ್‌ನಿಂದ ನಿರ್ಮಿಸಲಾಗಿರುವ ಈ ರಸ್ತೆಯು ಲೆಹ್ (ಜಿಂಗ್ರಾಲ್‌ನಿಂದ ಟ್ಯಾಂಗ್ಟ್ಸೆ) ನಿಂದ ಕೇಲಾ ಪಾಸ್ ದಾಟಿ ಸುಂದರವಾದ ಪ್ಯಾಂಗೊಂಗ್ ಸರೋವರಕ್ಕೆ ತಲುಪುವ ಈ ಮಾರ್ಗವು 41 ಕಿ.ಮೀ ಪ್ರಯಾಣವನ್ನು ಕಡಿಮೆ ಮಾಡುತ್ತದೆ ಎಂದು ಸಂಸದರು ತಿಳಿಸಿದ್ದಾರೆ.

‘ಇಂದು ಉದ್ಘಾಟನೆಗೊಂಡ 18,600 ಅಡಿಗಳಷ್ಟು ಎತ್ತರದಲ್ಲಿ ನಿರ್ಮಾಣವಾಗಿರುವ ಈ ರಸ್ತೆಯು ವಿಶ್ವದ ಅತಿ ಎತ್ತರದ ವಾಹನಗಳು ಸಂಚರಿಸಬಹುದಾದ ರಸ್ತೆಯಾಗಿದೆ. ಇಲ್ಲಿಯವರೆಗೆ, 18,380 ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ ಖರ್ದುಂಗ್ಲಾ ಪಾಸ್ ವಿಶ್ವದ ಅತಿ ಎತ್ತರದ ಮೋಟರಬಲ್ ರಸ್ತೆಯಾಗಿತ್ತು’ಎಂದು ಸಂಸದ ನಮಗ್ಯಾಲ್ ಪಿಟಿಐಗೆ ತಿಳಿಸಿದರು.

ADVERTISEMENT

ಸ್ಥಳೀಯ ನಿವಾಸಿಗಳ, ವಿಶೇಷವಾಗಿ ಲಡಾಖ್‌ನ ಲಾಲೋಕ್ ಪ್ರದೇಶದ ಜನರ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಭವಿಷ್ಯದಲ್ಲಿ ಈ ರಸ್ತೆ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ, ಈ ರಸ್ತೆ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.