ADVERTISEMENT

ಪಶ್ವಿಮ ರೈಲ್ವೆ ವಿಭಾಗ: ನವರಾತ್ರಿ, ದೀಪಾವಳಿ ಸಂದರ್ಭದಲ್ಲಿ 12 ವಿಶೇಷ ರೈಲುಗಳು

ಪಿಟಿಐ
Published 17 ಅಕ್ಟೋಬರ್ 2020, 6:26 IST
Last Updated 17 ಅಕ್ಟೋಬರ್ 2020, 6:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿವಿಧ ಮಾರ್ಗಗಳಲ್ಲಿ 12 ಜತೆ ವಿಶೇಷ ರೈಲುಗಳಸಂಚಾರವನ್ನು ಆರಂಭಿಸಲು ಪಶ್ಚಿಮ ರೈಲ್ವೆ ವಿಭಾಗ ನಿರ್ಧರಿಸಿದೆ.

ಸಾಮಾನ್ಯವಾಗಿ ಈ ಹಬ್ಬಗಳ ಸಂದರ್ಭದಲ್ಲಿ ರೈಲುಗಳಲ್ಲಿ ಹೆಚ್ಚು ಜನಜಂಗುಳಿ ಇರುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಈ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಾಗುತ್ತದೆ. ಇವು 156 ಬಾರಿ ಸಂಚರಿಸಲಿವೆ ಎಂದು ವಿಭಾಗ ತಿಳಿಸಿದೆ.

ಎಲ್ಲಾ ವಿಶೇಷ ರೈಲುಗಳಿಗೆ ವಿಶೇಷ ಶುಲ್ಕ ನಿಗದಿ ಪಡಿಸಲಾಗಿದೆ. ಇವುಗಳಲ್ಲಿನ ಎಲ್ಲ ಸೀಟುಗಳನ್ನು ಮುಂಗಡ ಕಾಯ್ದಿರಿಸಬೇಕು. ಅ. 17ರಿಂದ 22 ರವರೆಗೆ ಬುಕಿಂಗ್‌ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.