ADVERTISEMENT

ತಿಹಾರ್ ಜೈಲಿನಲ್ಲಿ ಮಲಿಕ್‌ಗೆ ಪ್ರತ್ಯೇಕ ಸೆಲ್‌

ಪಿಟಿಐ
Published 26 ಮೇ 2022, 12:39 IST
Last Updated 26 ಮೇ 2022, 12:39 IST

ನವದೆಹಲಿ(ಪಿಟಿಐ): ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ದೆಹಲಿ ಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್‌ನನ್ನು ಭಾರಿ ಭದ್ರತೆಯಲ್ಲಿ ಪ್ರತ್ಯೇಕ ಸೆಲ್‌ನಲ್ಲಿ ಇಡಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಗುರುವಾರ ಮಾತನಾಡಿದ ಜೈಲಿನ ಹಿರಿಯ ಅಧಿಕಾರಿಯೊಬ್ಬರು, ‘ಭದ್ರತೆ ಕಾರಣಕ್ಕೆ ಮಲಿಕ್‌ಗೆ ಈವರೆಗೆ ಯಾವುದೇ ಕೆಲಸವನ್ನು ವಹಿಸಲಾಗಿಲ್ಲ. ಭಾರಿ ಬಿಗಿ ಭದ್ರತೆಯಲ್ಲಿ ಜೈಲಿನ 7ನೇ ಸಂಖ್ಯೆಯ ಬಂದಿಖಾನೆಯಲ್ಲಿ ಅವರನ್ನು ಪ್ರತ್ಯೇಕವಾಗಿ ಇಡಲಾಗಿದೆ. ಸಂದರ್ಭಕ್ಕೆ ಅನುಸಾರವಾಗಿ ಅವರ ಭದ್ರತೆಯನ್ನು ಆಗಾಗ್ಗೆ ಪರಿಶೀಲಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಭದ್ರತೆಗೆ ಹಣಕಾಸು ನೀಡಿದ ಗಂಭೀರ ಪ್ರಕರಣ ಮಲಿಕ್ ಮೇಲಿರುವ ಕಾರಣ, ಅವರು ಪೆರೋಲ್‌ಗೆ ಅರ್ಹವಾಗಿರುವುದಿಲ್ಲ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.