ADVERTISEMENT

ವಿಶ್ವ ಯೋಗ ದಿನ: ಜನ ಮತ್ತು ದೇಶದ ಸ್ವಾಸ್ಥ್ಯ ಸುಧಾರಿಸುವ ಯೋಗ- ವೆಂಕಯ್ಯ ನಾಯ್ಡು

ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಪಿಟಿಐ
Published 21 ಜೂನ್ 2021, 5:58 IST
Last Updated 21 ಜೂನ್ 2021, 5:58 IST
ನವದೆಹಲಿಯ ಉಪರಾಷ್ಟ್ರಪತಿ ಭವನದಲ್ಲಿ ಸೋಮವಾರ ಅಂತರರಾಷ್ಟ್ರೀಯ ಯೋಗದಿನದ ಅಂಗವಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪತ್ನಿ ಉಷಾ ಅವರೊಂದಿಗೆ ಯೋಗ ಮಾಡಿದರು.  –ಚಿತ್ರ: ಉಪರಾಷ್ಟ್ರಪತಿ ಭವನದ ಟ್ವೀಟರ್ ಖಾತೆಯಿಂದ
ನವದೆಹಲಿಯ ಉಪರಾಷ್ಟ್ರಪತಿ ಭವನದಲ್ಲಿ ಸೋಮವಾರ ಅಂತರರಾಷ್ಟ್ರೀಯ ಯೋಗದಿನದ ಅಂಗವಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪತ್ನಿ ಉಷಾ ಅವರೊಂದಿಗೆ ಯೋಗ ಮಾಡಿದರು.  –ಚಿತ್ರ: ಉಪರಾಷ್ಟ್ರಪತಿ ಭವನದ ಟ್ವೀಟರ್ ಖಾತೆಯಿಂದ   

ನವದೆಹಲಿ: ಯೋಗಾಭ್ಯಾಸವನ್ನು ನಿತ್ಯ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕೆಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ದೇಶದ ಜನರಲ್ಲಿ ಮನವಿ ಮಾಡಿದರು.

‌ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸೋಮವಾರ ದೇಶದ ಜನರಿಗೆ ಶುಭಾಶಯ ತಿಳಿಸಿದ ಅವರು, ‘ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವ ಜತೆಗೆ ಸಮಾಜದ ಸ್ವಾಸ್ಥ್ಯವನ್ನು ಸುಧಾರಿಸುತ್ತದೆ‘ ಎಂದು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿಯ ಉಪರಾಷ್ಟ್ರಪತಿ ನಿವಾಸದ ಹುಲ್ಲು ಹಾಸಿನ ಮೇಲೆ ಪತ್ನಿ ಉಷಾ ಅವರೊಂದಿಗೆ ನಾಯ್ಡು ಅವರು ಯೋಗ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.