ADVERTISEMENT

Yoga Day- ಯೋಗ ಸಂಗಮ ಕಾರ್ಯಕ್ರಮಕ್ಕೆ 4 ಲಕ್ಷಕ್ಕೂ ಅಧಿಕ ನೋಂದಣಿ: ಆಯುಷ್ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 10:43 IST
Last Updated 18 ಜೂನ್ 2025, 10:43 IST
<div class="paragraphs"><p>ಯೋಗ ಸಂಗಮ ಕಾರ್ಯಕ್ರಮಕ್ಕೆ 4 ಲಕ್ಷಕ್ಕೂ ಅಧಿಕ ನೋಂದಣಿ: ಆಯುಷ್ ಸಚಿವಾಲಯ</p></div>

ಯೋಗ ಸಂಗಮ ಕಾರ್ಯಕ್ರಮಕ್ಕೆ 4 ಲಕ್ಷಕ್ಕೂ ಅಧಿಕ ನೋಂದಣಿ: ಆಯುಷ್ ಸಚಿವಾಲಯ

   

– ಎ.ಐ ಚಿತ್ರ

ನವದೆಹಲಿ: ಜೂನ್ 21ರ ಅಂತರರಾಷ್ಟ್ರೀಯ ಯೋಗದಿನದ ಅಂಗವಾಗಿ ನಡೆಯುವ ‘ಯೋಗ ಸಂಗಮ‌’ ಕಾರ್ಯಕ್ರಮಕ್ಕೆ ನೋಂದಣಿ ಮಾಡಿದವರ ಸಂಖ್ಯೆ 4 ಲಕ್ಷ ದಾಟಿದೆ ಎಂದು ಆಯುಷ್ ಸಚಿವಾಲಯ ಬುಧವಾರ ತಿಳಿಸಿದೆ.

ADVERTISEMENT

ದೇಶದಲ್ಲಿ ಯಾವುದೇ ಒಂದು ಕಾರ್ಯಕ್ರಮಕ್ಕೆ ಇಷ್ಟು ಪ್ರಮಾಣದಲ್ಲಿ ಭಾಗಿಯಾಗುವವರ ನೋಂದಣಿ ನಡೆದಿಲ್ಲ ಎಂದು ಅದು ಹೇಳಿಕೊಂಡಿದೆ.

ಜೂನ್ 21ರಂದು ದೇಶದ ಲಕ್ಷಾಂತರ ಸ್ಥಳಗಳಲ್ಲಿ ಏಕಕಾಲದಲ್ಲಿ ಯೋಗ ಪ್ರದರ್ಶನ ನಡೆಯಲಿದೆ, ಇದು ಭಾರತದ ಸ್ವಾಸ್ಥ್ಯ ಪ್ರಯಾಣದಲ್ಲಿ ಬಹುದೊಡ್ಡ ಮೈಲುಗಲ್ಲು ಎಂದು ಹೇಳಿದೆ.

ಪ್ರಮುಖ ಕಾರ್ಯಕ್ರಮ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಆಂಧ್ರ ‍ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೇಂದ್ರ ಆಯುಷ್ ಹಾಗೂ ಆರೋಗ್ಯ ಸಚಿವಾಲಯದ ರಾಜ್ಯ ಸಚಿವ ಪ್ರತಾಪ್‌ರಾವ್ ಯಾದವ್ ಭಾಗಿಯಾಗಲಿದ್ದಾರೆ. ಸುಮಾರು ಐದು ಲಕ್ಷಕ್ಕೂ ಅಧಿಕ ಮಂದಿ ಯೋಗ ‍ಪ್ರದರ್ಶನ ನೀಡಲಿದ್ದಾರೆ.

ಬೆಳಿಗ್ಗೆ 6.30ರಿಂದ 7.45ರವರೆಗೆ ಯೋಗ ಸಂಗಮ ಕಾರ್ಯಕ್ರಮ ನಡೆಯಲಿದೆ. ಲಕ್ಷಾಂತರ ಸಂಸ್ಥೆಗಳು, ಸಮುದಾಯಗಳು ಈ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದು, ಇದೊಂದು ಅತಿದೊಡ್ಡ ಕಾರ್ಯಕ್ರಮವಾಗಲಿದೆ ಎಂದು ಸಚಿವಾಲಯ ಆಶಾಭಾವನೆ ವ್ಯಕ್ತಪಡಿಸಿದೆ.

ರಾಜಸ್ಥಾನ, ಆಂಧ್ರ‍ ಪ್ರದೇಶ, ಉತ್ತರ ಪ್ರದೇಶ, ಮಧ್ಯ‍ ಪ್ರದೇಶ, ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹೆಚ್ಚಿನ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ನೋಂದಣಿ ಹೆಚ್ಚಿರುವುವುದು ಈ ವರ್ಷದ ಘೋಷವಾಕ್ಯ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಯೋಗವನ್ನು ಜಾಗತಿಕ ಸುಸ್ಥಿರತೆ ಮತ್ತು ವೈಯಕ್ತಿಕ ಯೋಗಕ್ಷೇಮದೊಂದಿಗೆ ಜೋಡಿಸುವ ಸಂದೇಶದ ಬಗ್ಗೆ ಇರುವ ವ್ಯಾಪಕ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.