ADVERTISEMENT

ಪುಲ್ವಾಮ ದಾಳಿ ಬಗ್ಗೆ ಕೇಳಿದಾಗ ಭಾವುಕರಾದ ಯೋಗಿ ಆದಿತ್ಯನಾಥ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 10:21 IST
Last Updated 23 ಫೆಬ್ರುವರಿ 2019, 10:21 IST
   

ನವದೆಹಲಿ: ಭಯೋತ್ಪಾದನೆಯನ್ನು ನಿಗ್ರಹಿಸಲು ನಿಮ್ಮ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆ ಕೇಳಿದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾವುಕರಾಗಿದ್ದಾರೆ.ಲಖನೌದಲ್ಲಿ ಶುಕ್ರವಾರ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಜತೆ ನಡೆದ ಸಂವಾದ ಕಾರ್ಯಕ್ರಮ ಯುವ ಕೇ ಮನ್ ಕೀ ಬಾತ್‍ನಲ್ಲಿ ವಿದ್ಯಾರ್ಥಿಯೊಬ್ಬಆದಿತ್ಯನಾಥರಲ್ಲಿ ಈಪ್ರಶ್ನೆ ಕೇಳಿದ್ದನು.

ಇದೊಂದು ಸರಣಿ ಕಾರ್ಯಕ್ರಮದಂತೆ ನಡೆಯುತ್ತಿದೆ.ಒಂದು ದಾಳಿಯಾದ ಕೂಡಲೇ ಅದರ ಬಗ್ಗೆ ತನಿಖೆಯಾಗುತ್ತದೆ.ಮತ್ತೆ ಯಥಾಸ್ಥಿತಿಗೆ ಮರಳುತ್ತೇವೆ. ಭಯೋತ್ಪಾದನೆಯನ್ನು ನಿಗ್ರಹ ಮಾಡಲು ನಿಮ್ಮ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ವಿದ್ಯಾರ್ಥಿ ಕೇಳಿದ್ದನು.

ಇದಕ್ಕೆ ಉತ್ತರಿಸಿದ ಯೋಗಿ, ಪ್ರಧಾನಿ ನರೇಂದ್ರ ನೇತೃತ್ವದಲ್ಲಿ ಭಯೋತ್ಪಾದನೆ ನಿಗ್ರಹವಾಗಲಿದೆ ಎಂದಿದ್ದಾರೆ.

ADVERTISEMENT

ದೀಪ ನಂದುವುದಕ್ಕಿಂತ ಮುನ್ನ ಹೆಚ್ಚು ಪ್ರಖರವಾಗಿ ಉರಿಯುತ್ತದೆ. ಕಾಶ್ಮೀರದಲ್ಲಿ ಈಗ ನಡೆಯುತ್ತಿರುವುದೂ ಅದೇ ಎಂದು ಹೇಳಿದ ಯೋಗಿ ಭಾವುಕರಾಗಿ ಕಣ್ಣೀರೊರಸಿಕೊಂಡಿದ್ದಾರೆ.

ಪುಲ್ವಾಮ ದಾಳಿ ನಡೆದು 48 ಗಂಟೆಗಳಲ್ಲಿ ನಮ್ಮ ಭದ್ರತಾ ಪಡೆ ಈ ದಾಳಿಯ ಸಂಚುಕೋರರನ್ನು ಸದೆ ಬಡಿದಿದೆ ಎಂದಿದ್ದಾರೆ ಯೋಗಿ ಆದಿತ್ಯನಾಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.