ADVERTISEMENT

ಉತ್ತರ ಪ್ರದೇಶ: ರೈತ ಪರ ಯೋಜನೆಗಳತ್ತ ಯೋಗಿಯ ಚಿತ್ತ

ಪಿಟಿಐ
Published 26 ಆಗಸ್ಟ್ 2021, 10:22 IST
Last Updated 26 ಆಗಸ್ಟ್ 2021, 10:22 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಲಖನೌ: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೆಲವು ರೈತ ಪರ ಯೋಜನೆಗಳ ಜಾರಿಗೆ ಮುಂದಾಗಿದ್ದಾರೆ.

ಅವುಗಳಲ್ಲಿ ಬೆಳೆ ತ್ಯಾಜ್ಯ ಸುಡುವ ಪ್ರಕರಣದಲ್ಲಿ ರೈತರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯುವುದು, ರೈತರು ಉಳಿಸಿಕೊಂಡಿರುವ ವಿದ್ಯುತ್‌ ಬಿಲ್‌ ಮನ್ನಾದಂತಹ ‘ಒನ್‌ ಟೈಮ್ ಸೆಟಲ್‌ಮೆಂಟ್‌(ಒಟಿಎಸ್‌) ಯೋಜನೆಗಳು ಸೇರಿವೆ.

‘ಈ ಹಿಂದೆ ರೈತ ಸಂಘಟನೆಗಳೊಂದಿಗೆ ಮುಖ್ಯಮಂತ್ರಿ ಸಂವಾದ ನಡೆಸಿದಾಗ ಬೆಳೆ ತ್ಯಾಜ್ಯ ಸುಡುವ ಪ್ರಕರಣದಲ್ಲಿ ರೈತರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯುವುದಾಗಿ ಹೇಳಿದ್ದರು. ಹಾಗೆಯೇ, ರೈತರ ಮೇಲೆ ವಿಧಿಸಿರುವ ದಂಡವನ್ನು ಕೈಬಿಡುವ ನಿರ್ಧಾರವನ್ನು ತೆಗೆದುಕೊಳ್ಳುವ ಬಗ್ಗೆ ತಿಳಿಸಿದ್ದರು‘ ಎಂದುಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

‘ವಿದ್ಯುತ್ ಬಾಕಿ ಇದ್ದರೂ, ರೈತರಿಗೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದಿಲ್ಲ. ಹಾಗೆಯೇ ವಿದ್ಯುತ್ ಬಾಕಿಯ ಮೇಲಿನ ಬಡ್ಡಿ ಮನ್ನಾ ಮಾಡಲು ಒಟಿಎಸ್ ಯೋಜನೆಯನ್ನು ತರಲು ಸರ್ಕಾರ ಸಿದ್ಧವಿದೆ‘ ಎಂದು ಅಧಿಕಾರಿ ತಿಳಿಸಿದ್ದಾರೆ.

‘ಕಬ್ಬಿನ ಬೆಲೆ ಹೆಚ್ಚಿಸಲಾಗುವುದು ಮತ್ತು ಎಲ್ಲಾ ಪಾಲುದಾರರೊಂದಿಗೆ ಮಾತುಕತೆ ನಡೆಸಿದ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮುಖ್ಯಮಂತ್ರಿ ಆಸಕ್ತಿ ತೋರಿದ್ದಾರೆ‘ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಸಕ್ಕರೆ ಕಾರ್ಖಾನೆಗಳು ಅಕ್ಟೋಬರ್ 20 ರಿಂದ ಪುನರಾರಂಭವಾಗುತ್ತವೆ. ಪೂರ್ವ ಭಾಗದಲ್ಲಿರುವ ಕಾರ್ಖಾನೆಗಳು ಅಕ್ಟೋಬರ್ 25 ರಿಂದ ಕಾರ್ಯಾರಂಭ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.