ADVERTISEMENT

ನಂ.1 ಭ್ರಷ್ಟರಾಗಿಯೇ ಜೀವ ಬಿಟ್ಟ ರಾಜೀವ್‌ ಗಾಂಧಿ: ಮೋದಿ ಮೂದಲಿಕೆ  

ಏಜೆನ್ಸೀಸ್
Published 5 ಮೇ 2019, 6:41 IST
Last Updated 5 ಮೇ 2019, 6:41 IST
   

ನವದೆಹಲಿ: ಪಕ್ಷದ ವೇದಿಕೆಗಳಲ್ಲಿ, ಭಾಷಣಗಳಲ್ಲಿ ಗಾಂಧಿ ಕುಟುಂಬವನ್ನು ಸದಾ ಟೀಕೆಗೆ ಗುರಿಪಡಿಸುವ ನರೇಂದ್ರ ಮೋದಿ ಅವರು, ಇಂದು ಮಾಜಿ ಪ್ರಧಾನಿ,ದಿವಂಗತ ರಾಜೀವ್‌ ಗಾಂಧಿಯವರನ್ನು ನಂ.1 ಭ್ರಷ್ಟ ಎಂದರು. ‘ನಿಮ್ಮ ತಂದೆ ನಂ.1 ಭ್ರಷ್ಟರಾಗಿಯೇ ಪ್ರಾಣ ಬಿಟ್ಟರು,’ ಎಂದು ಅವರು ಎಐಸಿಸಿ ಅಧ್ಯಕ್ಷರಾಹುಲ್‌ ಗಾಂಧಿಯವರನ್ನು ಟೀಕಿಸಿದರು.

ಉತ್ತರ ಪ್ರದೇಶದಲ್ಲಿ ಶನಿವಾರಚುನಾವಣಾ ಸಮಾವೇಶವೊಂದರಲ್ಲಿ ಭಾಗವಹಿಸಿದ್ದಅವರು, ‘ನಿಮ್ಮ ತಂದೆಯನ್ನು ಮಿ.ಕ್ಲೀನ್‌ ಎಂದು ಕರೆಯಲಾಗುತ್ತದೆ. ಆದರೆ, ನಿಮ್ಮ ತಂದೆ ಸತ್ತಿದ್ದೇ ನಂ.1 ಭ್ರಷ್ಟಾಚಾರಿಯಾಗಿ,’ ಎಂದು ಅವರು ಹೇಳಿದ್ದಾರೆ.

ರಫೇಲ್‌ ಒಪ್ಪಂದದಲ್ಲಿ ಹಗರಣವಾಗಿದೆ ಎಂದು ರಾಹುಲ್‌ ಗಾಂಧಿ ಅವರು ನಿರಂತರವಾಗಿ ಮೋದಿ ಅವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ.ಶನಿವಾರವಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್‌ ಗಾಂಧಿ ಅವರು ‘ಚೌಕಿದಾರನೇ ಕಳ್ಳ’ ಎಂದೂ, ಈ ಘೋಷಣೆಯನ್ನು ಕಾಂಗ್ರೆಸ್‌ ಬಳಸಿಕೊಳ್ಳುವುದಾಗಿಯೂ ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ಇಂದು ರಾಹುಲ್‌ ವಿರುದ್ಧ ವಾಗ್ದಾಳಿ ಮಾಡಿರುವ ಮೋದಿ, ರಾಜೀವ್‌ ಗಾಂಧಿಯವರನ್ನೂ ತಮ್ಮ ಟೀಕೆಗೆ‌ಎಳೆದುಕೊಂಡಿದ್ದಾರೆ.

ADVERTISEMENT

‘ನನ್ನ ಚಾರಿತ್ರ್ಯವಧೆ ಮಾಡಲು ಇವರೆಲ್ಲರೂ (ಪ್ರತಿಪಕ್ಷಗಳು) ಪ್ರಯತ್ನಿಸುತ್ತಿದ್ದಾರೆ. ನನ್ನನ್ನು ಸಣ್ಣವನಾಗಿ ಮಾಡುವ ಮೂಲಕ, ದೇಶದಲ್ಲಿ ಅಸ್ತಿರ ಸರ್ಕಾರವನ್ನು ರಚಿಸಲು ಇವರೆಲ್ಲರೂ ಹವಣಿಸುತ್ತಿದ್ಧಾರೆ ಎಂದೂ ಅವರು ಸಮಾವೇಶದಲ್ಲಿ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.