ADVERTISEMENT

ಬೆಂಗಳೂರು ಡ್ರಗ್‌ ಮಾಫಿಯಾ: ಕೇರಳ ಸಿಪಿಐ(ಎಂ) ನಾಯಕನ ಮಗನ ನಂಟು –ತನಿಖೆಗೆ ಆಗ್ರಹ

ಪಿಟಿಐ
Published 3 ಸೆಪ್ಟೆಂಬರ್ 2020, 2:28 IST
Last Updated 3 ಸೆಪ್ಟೆಂಬರ್ 2020, 2:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ತಿರುವನಂತಪುರ‌: ಬೆಂಗಳೂರಿನ ಡ್ರಗ್‌ ಮಾಫಿಯಾದಲ್ಲಿ ಕೇರಳ ಸಿಪಿಐ(ಎಂ) ನಾಯಕನ ಪುತ್ರನ ಪಾತ್ರವಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ (ಐಯುಎಂಎಲ್) ಯುವ ಘಟಕ ಆರೋಪಿಸಿದೆ.

ಸಿಪಿಐ(ಎಂ) ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ, ಬೆಂಗಳೂರಿನ ಡ್ರಗ್‌ ಮಾಫಿಯಾದ ಕೆಲ ಸದಸ್ಯರ ಜತೆ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಐಯುಎಂಎಲ್‌ ಆರೋಪಿಸಿದೆ.

ಕಮ್ಮನಹಳ್ಳಿಯ ಮೊಹಮ್ಮದ್‌ ಅನೂಪ್‌ ಡ್ರಗ್‌ ದಂಧೆಯ ಪ್ರಮುಖ ಆರೋಪಿಯಾಗಿದ್ದಾರೆ. ಇವರ ಹೋಟೆಲ್‌ ಉದ್ಯಮಕ್ಕೆ ಬಿನೀಶ್‌ ಹಣ ಹೂಡಿಕೆ ಮಾಡಿದ್ದರು ಎಂದು ಐಯುಎಂಎಲ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಫಿರೋಸ್ ಆರೋಪಿಸಿದ್ದಾರೆ.

ADVERTISEMENT

ಐಯುಎಂಎಲ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಬಿನೀಶ್‌, ಮೊಹಮ್ಮದ್‌ ಅನೂಪ್‌ ಹೊಟೇಲ್‌ ಉದ್ಯಮಕ್ಕೆ ಸಾಲ ನೀಡಿದ್ದೆ. ಆದರೆ ಆಗ ನನಗೆ ಅನೂಪ್‌ಗೆ ಡ್ರಗ್ಸ್‌ ಮಾಫಿಯಾದ ಹಿನ್ನೆಲೆ ಇದೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

ಈ ಪ್ರಕರಣ ಕುರಿತಂತೆ ತನಿಖೆ ನಡೆಸಬೇಕು ಎಂದು ಬಿಜೆಪಿ ಸಹ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.