ಅಮರಾವತಿ: ವೈಎಸ್‌ಆರ್‌ಸಿಪಿ ಬೆಂಬಲಿಗರಿಗೆ ನೇರ ಅಥವಾ ಪರೋಕ್ಷವಾಗಿ ಯಾವುದೇ ಸಹಾಯ ಸಿಕ್ಕರೆ ನಾನು ಮೌನವಾಗಿರುವುದಿಲ್ಲ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇತ್ತೀಚೆಗೆ ನೀಡಿರುವ ಹೇಳಿಕೆ ಭಾರಿ ಸಂಚಲನ ಮುಡಿಸಿದೆ. ಹೇಳಿಕೆ ಕುರಿತು ವೈಎಸ್‌ಆರ್‌ಸಿಪಿ ನಿಯೋಗ ಆಂಧ್ರಪ್ರದೇಶ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರ ಮಧ್ಯಪ್ರವೇಶಕ್ಕೆ ಒತ್ತಾಯಿಸಿದೆ.
ನಿಯೋಗದ ಪ್ರಕಾರ, ನಾಯ್ಡು ಇತ್ತೀಚೆಗೆ ಗಂಗಾಧರ ನೆಲ್ಲೂರಿನಲ್ಲಿ ನಡೆದ ಟಿಡಿಪಿ ಸಭೆಯಲ್ಲಿ ಮಾತನಾಡಿ, ‘ಯಾರೂ ವೈಎಸ್‌ಆರ್‌ಸಿಪಿ ಬೆಂಬಲಿಗರಿಗೆ ಯಾವುದೇ ರೀತಿಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡಬಾರದು. ಅವರಿಗೆ ಸಹಾಯ ಮಾಡುವುದು ಹಾವಿಗೆ ಹಾಲು ಕುಡಿಸಿದಂತೆ’ಎಂದು ಹೇಳಿದ್ದರು.
‘ಮುಖ್ಯಮಂತ್ರಿಯೊಬ್ಬರ ಇಂತಹ ಹೇಳಿಕೆಗಳು ಆಶ್ಚರ್ಯಕರವಾಗಿವೆ. ಅವು ನೆಲದ ಕಾನೂನಿನ ಸಂಪೂರ್ಣ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತವೆ. ಪ್ರಜಾಪ್ರಭುತ್ವದಲ್ಲಿ ಒಬ್ಬ ಮುಖ್ಯಮಂತ್ರಿ ವಿರೋಧ ಪಕ್ಷದ ಬಗ್ಗೆ ಇಷ್ಟೊಂದು ಅಸಹಿಷ್ಣುತೆ ಮತ್ತು ದ್ವೇಷದ ಮಟ್ಟಕ್ಕೆ ಇಳಿಯಬಹುದೇ ಎಂಬುದನ್ನು ನಂಬಲಾಗದು’ ಎಂದು ವೈಎಸ್‌ಆರ್‌ಸಿಪಿ ನಾಯಕ ಬಿ. ಸತ್ಯನಾರಾಯಣ ಅವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ವೈಎಸ್‌ಆರ್‌ಸಿಪಿ ನಾಯಕರು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ವೈಯಕ್ತಿಕವಾಗಿ ಪತ್ರವನ್ನು ಸಲ್ಲಿಸಿದ್ದಾರೆ.
ವೈಎಸ್‌ಆರ್‌ಸಿಪಿ ಕಾರ್ಯಕರ್ತರಿಗೆ ಸಣ್ಣ ಉಪಕಾರ ಮಾಡಿದರೂ ಸಹ ನಾನು ಮೌನವಾಗಿರುವುದಿಲ್ಲ ಎಂದು ನಾಯ್ಡು ಹೇಳಿದ್ದಾರೆ ಎಂದು ಆರೋಪಿಸಿರುವ ವೈಎಸ್‌ಆರ್‌ಸಿಪಿ ನಿಯೋಗವು, ಈ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸಿದೆ.
"It appears the CM is unmindful of the fundamentals of democracy. The opposition represents a different ideology but should not be treated as a personal enemy," they said.
Furthermore, the opposition leaders alleged that the TDP-led government was registering illegal cases against political activists, workers, journalists, and sympathisers of YSRCP.
Considering what they described as the partisan, unconstitutional, and illegal governance of the NDA alliance, the YSRCP leaders urged the Governor to intervene and restore lawful governance in the state, per the Constitution of India.
‘ಮುಖ್ಯಮಂತ್ರಿ ಪ್ರಜಾಪ್ರಭುತ್ವದ ಮೂಲಭೂತ ಅಂಶಗಳನ್ನು ನಿರ್ಲಕ್ಷಿಸುತ್ತಿರುವಂತೆ ತೋರುತ್ತಿದೆ. ವಿರೋಧ ಪಕ್ಷವು ವಿಭಿನ್ನ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ. ಆದರೆ, ಅದನ್ನು ವೈಯಕ್ತಿಕ ಶತ್ರು ಎಂದು ಪರಿಗಣಿಸಬಾರದು’ಎಂದು ಸತ್ಯನಾರಾಯಣ ಅವರು ಹೇಳಿದ್ದಾರೆ..
ಇದಲ್ಲದೆ, ಟಿಡಿಪಿ ನೇತೃತ್ವದ ಸರ್ಕಾರವು ರಾಜಕೀಯ ಕಾರ್ಯಕರ್ತರು, ಕಾರ್ಮಿಕರು, ಪತ್ರಕರ್ತರು ಮತ್ತು ವೈಎಸ್‌ಆರ್‌ಸಿಪಿ ಜೊತೆ ಗುರುತಿಸಿಕೊಂಡವರ ವಿರುದ್ಧ ಕಾನೂನುಬಾಹಿರ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಪಕ್ಷಪಾತ, ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಆಡಳಿತ ಎಂದು ಅವರು ವಿವರಿಸಿದ್ದನ್ನು ಪರಿಗಣಿಸಿ, ವೈಎಸ್‌ಆರ್‌ಸಿಪಿ ನಾಯಕರು ರಾಜ್ಯಪಾಲರನ್ನು ಮಧ್ಯಪ್ರವೇಶಿಸಿ ಭಾರತದ ಸಂವಿಧಾನದ ಪ್ರಕಾರ ರಾಜ್ಯದಲ್ಲಿ ಕಾನೂನುಬದ್ಧ ಆಡಳಿತವನ್ನು ಪುನಃಸ್ಥಾಪಿಸುವಂತೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.