ADVERTISEMENT

Covid-19 Vaccine Update | ಇಂದಿನಿಂದ ಝೈಡೂಸ್ ವ್ಯಾಕ್ಸಿನ್ 2ನೇ ಹಂತದ ಪರೀಕ್ಷೆ

ಏಜೆನ್ಸೀಸ್
Published 6 ಆಗಸ್ಟ್ 2020, 2:12 IST
Last Updated 6 ಆಗಸ್ಟ್ 2020, 2:12 IST
   

ನವದೆಹಲಿ: ಕೊರೊನಾ ವೈರಸ್‌ ತಡೆಗಟ್ಟುವಲ್ಲಿ ಪರಿಣಾಮಕಾರಿ ಲಸಿಕೆ ಎಂದು ಹೇಳಲಾಗುತ್ತಿರುವ ಝೈಕೊವ್-ಡಿ (ZyCoV-D) ಲಸಿಕೆಯ 2ನೇ ಹಂತದ ಪರೀಕ್ಷೆ ಇಂದಿನಿಂದ (ಆಗಸ್ಟ್ 6) ಆರಂಭವಾಗಲಿದೆ ಎಂದು ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

'ಕೋವಿಡ್-19 ತಡೆಯುವ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆ ಝೈಕೊವ್-ಡಿ ಮೊದಲ ಹಂತದ ಪರೀಕ್ಷೆಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಿದೆ. ಜುಲೈ 15ರಂದು ಆರಂಭವಾದ ಮೊದಲ ಹಂತದ ಪರೀಕ್ಷೆಗಳಲ್ಲಿ ಆರೋಗ್ಯವಂತರಿಗೆ ಲಸಿಕೆಯನ್ನು ನೀಡಿ ತಪಾಸಣೆ ನಡೆಸಲಾಯಿತು. ಇದು ಪರಿಣಾಮಕಾರಿ ಎಂದು ನಿರೂಪಿತಗೊಂಡಿತು.6ನೇ ಆಗಸ್ಟ್‌ನಿಂದ ಕಂಪನಿಯು 2ನೇ ಹಂತದ ಪರೀಕ್ಷೆ ಆರಂಭಿಸಲಿದೆ. 1000 ಮಂದಿಗೆ ಲಸಿಕೆ ನೀಡಿ, ಅವರ ದೇಹ ಪ್ರತಿಕ್ರಿಯಿಸುವ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು' ಎಂದು ಝೈಡೂಸ್ ಕ್ಯಾಡಿಲಾ ಕಂಪನಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಲಸಿಕೆಯನ್ನು ಪ್ರಾಣಿಗಳಿಗೆ ನೀಡಿ ಪರೀಕ್ಷಿಸಿದಪ್ರಿ ಕ್ಲಿನಿಕಲ್ ಅಧ್ಯಯನ ವೇಳೆ ಇದು ಸುರಕ್ಷಿತ, ರೋಗ ನಿರೋಧಕ ಶಕ್ತಿಯನ್ನು ನಿರೀಕ್ಷೆಯಂತೆ ಹೆಚ್ಚಿಸುವ ಮತ್ತು ದೇಹಕ್ಕೆ ಹಾನಿಯುಂಟುಮಾಡದ ಅಂಶಗಳು ಸಾಬೀತಾದವು. ಲಸಿಕೆ ನೀಡಿದ ಪ್ರಾಣಿಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿತ್ತು.ಮನುಷ್ಯರ ಮೇಲೆ ಔಷಧಿ ಪ್ರಯೋಗಿಸಲು ಕಂಪನಿಗೆ ಕೇಂದ್ರ ಔಷಧ ನಿಯಂತ್ರಕರು ಜುಲೈ 2ರಂದು ಅನುಮತಿ ನೀಡಿದ್ದರು. ಫಲಿತಾಂಶಗಳನ್ನು ಕಂಪನಿಯು ಈವರೆಗೆ ಸಾರ್ವಜನಿಕಗೊಳಿಸಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.