ADVERTISEMENT

ಅಂತರರಾಷ್ಟ್ರೀಯ ಇಸ್ಕೋ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 19:30 IST
Last Updated 4 ಆಗಸ್ಟ್ 2012, 19:30 IST

ಮೈಸೂರು: ಎರಡು ದಶಕಗಳ ನಂತರ ಭಾರತದಲ್ಲಿ ನಡೆಯಲಿರುವ 12ನೇ ದ್ವೈವಾರ್ಷಿಕ ಅಂತರರಾಷ್ಟ್ರೀಯ ಇಸ್ಕೋ ಸಮ್ಮೇಳನಕ್ಕೆ ಮೈಸೂರು ವಿಶ್ವವಿದ್ಯಾಲಯ ಆತಿಥ್ಯ ವಹಿಸಲಿದೆ.

ಜ್ಞಾನ ವ್ಯವಸ್ಥಾಪನೆ ಅಂತರರಾಷ್ಟ್ರೀಯ ಸೊಸೈಟಿ (ಇಸ್ಕೋ), ಪುದುವಟ್ಟುವಿನ ಶಾರದಾ ರಂಗನಾಥ್ ಗ್ರಂಥಾಲಯ ವಿಜ್ಞಾನ ಮತ್ತು ಮೈಸೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಗಸ್ಟ್ 6ರಿಂದ 9ರವರೆಗೆ ಹುಣಸೂರು ರಸ್ತೆಯ ಬಿ.ಎನ್. ಬಹಾದ್ದೂರ್ ಮ್ಯಾನೇಜ್‌ಮೆಂಟ್ ಸೈನ್ಸ್ ಸಂಸ್ಥೆಯಲ್ಲಿ ಸಮ್ಮೇಳನ ನಡೆಯಲಿದೆ.

ಸಮ್ಮೇಳನದ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಮ್ಮೇಳನದ ಸಂಯೋಜಕ ಪ್ರೊ. ರಾಘವನ್, `1992ರಲ್ಲಿ ಪ್ರಸಿದ್ಧ ಗ್ರಂಥಾಲಯ ತಜ್ಞ ರಂಗನಾಥ್ ಅವರ ಜನ್ಮಶತದಿನೋತ್ಸವದ ಅಂಗವಾಗಿ ಚೆನ್ನೈನಲ್ಲಿ ಈ ಪ್ರತಿಷ್ಠಿತ ಸಮ್ಮೇಳನ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.