ADVERTISEMENT

ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 19:59 IST
Last Updated 4 ಜೂನ್ 2013, 19:59 IST

ಬೆಂಗಳೂರು: ರಾಜ್ಯದ ಮಾಜಿ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿ, ಖ್ಯಾತ ಗಾಯಕರಾಗಿದ್ದ ಪಿ.ಬಿ. ಶ್ರೀನಿವಾಸ್ ಸೇರಿದಂತೆ ಅಗಲಿದ ಗಣ್ಯರಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮಾಜಿ ಸಚಿವರಾಗಿದ್ದ ಎಂ.ಎನ್. ನಾಗನೂರ, ಮಾಜಿ ಶಾಸಕರಾಗಿದ್ದ ಪುಂಡಲೀಕಪ್ಪ ಜ್ಞಾನಮೋಟೆ, ಕೆ.ಡಿ. ಪಾಟೀಲ ಅವರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ಪರಿಷತ್ತಿನಲ್ಲಿ ಮೇಲಿನ ಐವರಲ್ಲದೆ, ಮಾನವ ಕಂಪ್ಯೂಟರ್ ಎಂದೇ ಖ್ಯಾತವಾಗಿದ್ದ ಶಕುಂತಲಾದೇವಿ, ಲಾಲ್ಗುಡಿ ಜಯರಾಮನ್, ಉದ್ಯಮಿ ಡಿ.ಕೆ. ಆದಿಕೇಶವಲು ಅವರ ನಿಧನಕ್ಕೂ ಶ್ರದ್ಧಾಂಜಲಿ ಅರ್ಪಿಸಲಾಯಿತು.

`ಛತ್ತೀಸ್‌ಗಡದಲ್ಲಿ ನಕ್ಸಲಿಯರ ದಾಳಿಗೆ ತುತ್ತಾದ ನಾಯಕರು ಮತ್ತು ಭದ್ರತಾ ಸಿಬ್ಬಂದಿಗೂ ಶ್ರದ್ಧಾಂಜಲಿ ಅರ್ಪಿಸಬೇಕು' ಎಂದು ಪರಿಷತ್ತಿನಲ್ಲಿ ಡಿ.ವಿ. ಸದಾನಂದಗೌಡ ಆಗ್ರಹಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.