
ಪ್ರಜಾವಾಣಿ ವಾರ್ತೆನಾಗಮಂಗಲ: ಬೆಂಗಳೂರಿನಿಂದ ಮಂಗಳೂರಿಗೆ ಮರಳುತ್ತಿದ್ದ ಇನ್ನೊವಾ ಕಾರು ಹಾಗೂ ಎದುರುಗಡೆಯಿಂದ ಬರುತ್ತಿದ್ದ ಮಿನಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳ ದಲ್ಲೇ ಮೃತಪಟ್ಟು, ಇತರ 12 ಜನ ಗಾಯಗೊಂಡ ಘಟನೆ ತಾಲ್ಲೂಕಿನ ಎ.ನಾಗತಿಹಳ್ಳಿ ಬಳಿ ಭಾನುವಾರ ಸಂಜೆ ನಡೆದಿದೆ
ಮೂಲ್ಕಿಯ ವಿಜಯಾ ಕಾಲೇಜಿನ ಪ್ರಾಂಶುಪಾಲ ಅರವಿಂದ ಜೋಶಿ ಮತ್ತು ಕಾರಿನ ಚಾಲಕ ವಿಜಯ್‌ಕುಮಾರ್ ಮೃತರು.
ಕಾರಿನಲ್ಲಿದ್ದ ರೋಷನ್ ಕುಮಾರ್ (34), ಸುರೇಂದ್ರಕುಮಾರ್ (56) ಮತ್ತು ನಾಗರಾಜ್ ನಾಯಕ್ (45) ಮತ್ತು ಮಿನಿ ಬಸ್‌ನಲ್ಲಿದ್ದ 9 ಮಂದಿ ಗಾಯಗೊಂಡಿದ್ದು ಅವರಿಗೆ ಎ.ಸಿ. ಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.