ಪುತ್ತೂರು: ತಾಲ್ಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರು ಸೇತುವೆ ಬಳಿ ಭಾನುವಾರ ಸಂಜೆ ಸಂಭವಿಸಿದ ಸರ್ಕಾರಿ ಬಸ್-ಜೀಪ್ ಡಿಕ್ಕಿ ಪ್ರಕರಣದಲ್ಲಿ ಪುತ್ತೂರು ಪುರಸಭಾ ಸದಸ್ಯೆ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಪುತ್ತೂರು ಪುರಸಭಾ ಸದಸ್ಯೆ ಲೀನಾ ಮಸ್ಕರೇನ್ಹಸ್ (46), ಅವರ ಪತಿ ಪೀಟರ್ ಮಸ್ಕರೇನ್ಹಸ್ , ಕಿರಿಯ ಪುತ್ರ ಪ್ರೀತೇಶ್ (12) ಮತ್ತು ಪೀಟರ್ ಮಸ್ಕರೇನ್ಹಸ್ ಅವರ ಸಹೋದರ ಅಂತೋನಿ ಮಸ್ಕರೇನ್ಹಸ್ (42) ಎಂದು ಗುರುತಿಸಲಾಗಿದೆ. ಅವರು ಬೈಪಾಸ್ ತೆಂಕಿಲ ನಿವಾಸಿಗಳು.
ತೆಂಕಿಲದ ರಾಮಣ್ಣ ಗೌಡರ ಪುತ್ರಿಯ ವಿವಾಹ ಒಳಮೊಗ್ರು ಗ್ರಾಮದ ಪರ್ಪುಂಜದ ಸಭಾಂಗಣದಲ್ಲಿ ಭಾನುವಾರ ನಡೆದಿದ್ದು, ಅದರಲ್ಲಿ ಪಾಲ್ಗೊಂಡು ಪೀಟರ್ ಮಸ್ಕರೇನ್ಹಸ್ ಕುಟುಂಬ ಪುತ್ತೂರಿಗೆ ಹಿಂತಿರುಗುವಾಗ ಅಪಘಾತ ನಡೆದಿದೆ. ಈ ಅಪಘಾತದಿಂದ ಸುಮಾರು 2 ಗಂಟೆ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.