ಸಿದ್ದಾಪುರ: ಪಟ್ಟಣದ ಹಾಳದಕಟ್ಟಾದ ರಜತ ಕಲಾಕಾರ ರಮೇಶ ಕೇಶವ ರಾಯ್ಕರ್ ತಯಾರಿಸಿರುವ ಬೆಳ್ಳಿಯ ಮೂರು ಪ್ರಭಾವಳಿಗಳು ಅಮೆರಿಕದಲ್ಲಿನ ದೇವಾಲಯಗಳನ್ನು ಸಿಂಗರಿಸಲು ಸಜ್ಜಾಗಿವೆ.
ಕ್ಯಾಲಿಫೋರ್ನಿಯಾ ರಾಜ್ಯದಲ್ಲಿನ ಬಾಲಾಜಿ ದೇವಾಲಯಗಳಿಗಾಗಿ ಈ ಪ್ರಭಾವಳಿಗಳನ್ನು ತಯಾರಿಸಿರುವ ಅವರು, ಇದಕ್ಕಾಗಿ ಒಟ್ಟು 28 ಕೆ.ಜಿ. ಬೆಳ್ಳಿ ಉಪಯೋಗಿಸಿದ್ದಾರೆ. ಈ ಪ್ರಭಾವಳಿಗಳು ಅನುಕ್ರಮವಾಗಿ ಆರೂವರೆ, ಆರೂಕಾಲು ಮತ್ತು ಐದು ಅಡಿ ಎತ್ತರವಿದ್ದು, ಇವುಗಳ ಮೇಲೆ ಸುಂದರವಾರ ಚಿತ್ರಗಳನ್ನು ರಮೇಶ ರಚಿಸಿದ್ದಾರೆ.
`ಈ ಪ್ರಭಾವಳಿಗಳನ್ನು ತಯಾರಿಸಲು ಆರು ತಿಂಗಳು ತಗುಲಿದೆ. ಈ ಕೆಲಸದಲ್ಲಿ ಜಗದೀಶ್ ಶೇಟ್ ಮತ್ತು ವಿಶ್ವಜೀತ್ ರಾಯ್ಕರ್ ಸಹಾಯ ಮಾಡಿದ್ದಾರೆ. ಈ ಬೆಳ್ಳಿ ಪ್ರಭಾವಳಿಗಳನ್ನು ಬೆಂಗಳೂರಿನ ನಿವಾಸಿಯೊಬ್ಬರ ನೇತೃತ್ವದಲ್ಲಿ ಅಮೆರಿಕದ ಅನಿವಾಸಿ ಭಾರತೀಯರು ದೇವಾಲಯಗಳಿಗಾಗಿ ಮಾಡಿಸಿದ್ದಾರೆ' ಎನ್ನುತ್ತಾರೆ ರಮೇಶ ರಾಯ್ಕರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.