ADVERTISEMENT

ಆಗುಂಬೆಯಲ್ಲಿ 5 ಸೆಂ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:30 IST
Last Updated 12 ಜುಲೈ 2012, 19:30 IST

ಬೆಂಗಳೂರು: ರಾಜ್ಯ ಒಳನಾಡಿನಲ್ಲಿ ಮುಂಗಾರು ಕ್ಷೀಣಿಸಿದೆ. ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳು ಮತ್ತು ಉತ್ತರ ಒಳನಾಡಿನಲ್ಲಿ ಮಳೆಯಾಗಿದೆ.

ಆಗುಂಬೆಯಲ್ಲಿ 5 ಸೆಂ.ಮೀ ಮಳೆಯಾಗಿದೆ. ಬೆಳ್ತಂಗಡಿ, ಕದ್ರಾ, ಕೊಟ್ಟಿಗೆಹಾರ 3, ಪಣಂಬೂರು, ಮಂಗಳೂರು ವಿಮಾ ನಿಲ್ದಾಣ, ಮಂಗಳೂರು, ಮೂಡಬಿದಿರೆ, ಬಂಟ್ವಾಳ, ಧರ್ಮಸ್ಥಳ, ಸುಳ್ಯ, ಕೋಟ, ಕಾರ್ಕಳ, ಕೊಲ್ಲೂರು, ಸಿದ್ದಾಪುರ (ಉಡುಪಿ ಜಿಲ್ಲೆ), ಮಂಕಿ, ಕುಮಟಾ, ಅಂಕೋಲಾ, ನಿಲ್ಕುಂದ, ಶಿರಸಿ, ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ), ಉಡುಪಿ, ಕಾರವಾರ, ಭಾಗಮಂಡಲ, ನಾಪೋಕ್ಲು, ವಿರಾಜಪೇಟೆ, ಮಡಿಕೇರಿ, ಲಿಂಗನಮಕ್ಕಿ, ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ 2 , ಮಾಣಿ, ಪುತ್ತೂರು, ಉಪ್ಪನಂಗಡಿ, ಸುಬ್ರಹ್ಮಣ್ಯ, ಕುಂದಾಪುರ, ಯಲ್ಲಾಪುರ, ಜಗಳಪೇಟೆ, ಬೈಲಹೊಂಗಲ, ಸೇಡಂ, ಪೊನ್ನಂಪೇಟೆ, ಕುಶಾಲನಗರ, ಮಾದಾಪುರ, ತಾಳಗುಪ್ಪ, ಹೊಸನಗರ, ಹುಂಚದಕಟ್ಟೆ, ಕಳಸ, ಜಯಪುರ, ಕಮ್ಮರಡಿ, ಸಕಲೇಶಪುರ ಮತ್ತು ಪರಶುರಾಮಪುರದಲ್ಲಿ 1 ಸೆಂ.ಮೀ ಮಳೆಯಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದ ಕರಾವಳಿ ಮತ್ತು  ರಾಜ್ಯದ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.