ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ನಾಮಪತ್ರ ಪರಿಶೀಲನೆ ಗುರುವಾರ ನಡೆಯಿತು. 23 ಅಭ್ಯರ್ಥಿಗಳಲ್ಲಿ ಪಕ್ಷೇತರರಾಗಿದ್ದ ಟಿ.ಎಂ.ಮಂಚೇಗೌಡ ಮತ್ತು ಮನಿಯ ಬೋವಿ ಎಂಬುವವರ ನಾಮಪತಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಎಂ.ಟಿ.ರೇಜು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದವರಲ್ಲಿ ಐವರು ಚಿಕ್ಕಮಗಳೂರು ಜಿಲ್ಲೆ, ಮೂವರು ದಕ್ಷಿಣ ಕನ್ನಡ, ಒಬ್ಬರು ಬೀದರ್, ಉಳಿದವರು ಉಡುಪಿ ಜಿಲ್ಲೆಯವರು.
ಕ್ರಮಬದ್ಧ: ಕೆ.ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್), ವಿ.ಸುನೀಲ್ ಕುಮಾರ್ (ಬಿಜೆಪಿ), ಎಸ್.ಎಲ್. ಬೋಜೇಗೌಡ (ಜೆಡಿಎಸ್), ಅಬ್ದುಲ್ ರೆಹಮಾನ್ (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ), ಅಮಿರ್ ಹಂಜ(ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ), ಜಮಿರುದ್ದಿನ್(ನ್ಯಾಷನಲ್ ಡೆವಲಪ್‌ಮೆಂಟ್ ಪಾರ್ಟಿ), ಕೆ.ಭರತ್(ಜೆಡಿಯು), ಕೆ.ಚಂದ್ರಶೇಖರ್ (ನ್ಯಾಷನಲ್ ಡೆಮಾಕ್ರೆಟಿಕ್ ಪಾರ್ಟಿ), ಅಸಾದುಲ್ಲ ಕಟಪಾಡಿ, ಖಾದರ್, ಎಚ್.ಎಂ.ತಾರಕ ಪ್ರಕಾಶಂ, ದೀಪಕ್ ರಾಜೇಶ್ ಗೋಯಿಲ್, ರಿಯಾಜ್, ಎನ್.ವೆಂಕಟೇಶ್, ಶ್ರೀಧರ ಪೇದೆಮನೆ, ಶ್ರೀನಿವಾಸ ಪೂಜಾರಿ, ಸುಪ್ರಿತಾ ಕುಮಾರ್ ಪೂಜಾರಿ, ಎಚ್.ಸುರೇಶ್ ಪೂಜಾರಿ, ಬಿ.ಕೆ.ಸುಶೀಲಾ ಜೀವಳಾ, ಹರಿಶಾನುಬೋಗ ಮತ್ತು ಜಯಪ್ರಕಾಶ್(ಪಕ್ಷೇತರ) ಕಣದಲ್ಲಿದ್ದಾರೆ.
ನಾಮಪತ್ರ ಹಿಂಪಡೆಯಲು ಶನಿವಾರ ಕೊನೆ ದಿನ.ಇದೇ 18ರಂದು ಮತದಾನ. 21ರಂದು ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಟಿ.ಎ.ಪೈ ಆಂಗ್ಲಮಾಧ್ಯಮ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.