ADVERTISEMENT

ಎಂಜಿನಿಯರಿಂಗ್‌ ಶುಲ್ಕ ನಿಗದಿ: ಬಗೆಹರಿಯದ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಬೆಂಗಳೂರು: ಎಂಜಿನಿಯರಿಂಗ್‌ ಕೋರ್ಸ್‌ಗಳ ಶುಲ್ಕ ನಿಗದಿಪಡಿಸುವ ಸಂಬಂಧ ಉಂಟಾಗಿರುವ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ.
ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಗಳ ಒಕ್ಕೂಟದ ಪದಾಧಿ­ಕಾರಿ­ಗಳೊಂದಿಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಶನಿವಾರ ಮಾತುಕತೆ ನಡೆಸಿದರು. ಆದರೆ, ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸೋಮವಾರ ಮತ್ತೆ ಸಭೆ ನಡೆಯ ಲಿದ್ದು, ಶುಲ್ಕ  ಹೆಚ್ಚಳ ವಿಷಯದಲ್ಲಿ ಉಂಟಾಗಿರುವ ಬಿಕ್ಕಟ್ಟು ಅಂದು ಬಗೆಹರಿಯುವ ವಿಶ್ವಾಸವಿದೆ ಎಂದು ಮೂಲಗಳು ತಿಳಿಸಿವೆ.

ಖಾಸಗಿ ಅನುದಾನರಹಿತ ಕಾಲೇಜು­ಗಳ ಒಕ್ಕೂಟದ ಕಾರ್ಯ­ದರ್ಶಿ ಎಂ.ಕೆ.­ಪಾಂಡುರಂಗಶೆಟ್ಟಿ ಅವರೂ ಶನಿವಾರ ಸಭೆಯಲ್ಲಿ ಭಾಗ­ವ­ಹಿಸಿ­ರಲಿಲ್ಲ. ಉಪಾಧ್ಯಕ್ಷ ಸಿ.ಎಂ.ಲಿಂಗಪ್ಪ, ಕರ್ನಾಟಕ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳ ಒಕ್ಕೂಟದ ಶಫಿ ಅಹ್ಮದ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.