ADVERTISEMENT

‘ಎಂ.ಬಿ.ಪಾಟೀಲ ಉಪಮುಖ್ಯಮಂತ್ರಿ ಆಗುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 19:30 IST
Last Updated 11 ಜೂನ್ 2018, 19:30 IST
‘ಎಂ.ಬಿ.ಪಾಟೀಲ ಉಪಮುಖ್ಯಮಂತ್ರಿ ಆಗುವುದಿಲ್ಲ’
‘ಎಂ.ಬಿ.ಪಾಟೀಲ ಉಪಮುಖ್ಯಮಂತ್ರಿ ಆಗುವುದಿಲ್ಲ’   

ತುಮಕೂರು: ಎಂ.ಬಿ.ಪಾಟೀಲ ಅವರಂತಹವರು ಪಕ್ಷದಲ್ಲಿ ಬಹಳಷ್ಟು ಮುಖಂಡರು ಇದ್ದು, ಉಪಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಅವರ ಹಿಂದೆ ಹತ್ತು ಹದಿನೈದು ಶಾಸಕರು ಇದ್ದಾರೆ ಎಂಬುದು ಸುಳ್ಳು ಮಾಹಿತಿ ಎಂದು ಕಾರ್ಮಿಕ ಸಚಿವ ವೆಂಕಟರಣಪ್ಪ ತಿಳಿಸಿದರು.

ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಇರುವುದೇ ಆರೋಪ ಮಾಡುವುದಕ್ಕೆ. ಅದರ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಸಮ್ಮಿಶ್ರ ಸರ್ಕಾರ 5 ವರ್ಷಗಳ ಕಾಲ ಸುಭದ್ರವಾಗಿ ಕಾರ್ಯನಿರ್ವಹಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಮಿಕ ಆರೋಗ್ಯ ವಿಮೆ (ಇಎಸ್‍ಐ), ಭವಿಷ್ಯ ನಿಧಿ (ಪಿಎಫ್) ಮತ್ತಿತರ ಹೆಸರಿನಲ್ಲಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರಿಂದ ಹಣ ವಸೂಲಿ ಮಾಡಿ ವಂಚನೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.