ಬೆಂಗಳೂರು : ಈ ಬಾರಿ ನೀರಾವರಿ ಇಲಾಖೆ ಪಡೆದಿರುವ ಮೊತ್ತ 10,500 ಕೋಟಿ ರೂಗಳು. ಇದರಲ್ಲಿ ನೂರು ಕೆರೆಗಳ ಪುನಶ್ಚೇತನಕ್ಕೆ ಉದ್ದೇಶಿಸಲಾಗಿದೆ.
ಮಹತ್ವದ ಎತ್ತಿನ ಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಿ ಆ ಮೂಲಕ ಕುಡಿಯು ನೀರನ್ನು ಪೂರೈಸಲು ಉದ್ದೇಶಿಸಲಾಗಿದೆ.
ತುಂಗಾಭದ್ರಾ ಜಲಾಶಯದಿಂದ ಹೂಳು ತೆಗೆಯಲು ಯೋಜನೆ ಹಾಕಿಕೊಳ್ಳಲಾಗಿದೆ.
ಕಬಿನಿ ಬಲದಂಡೆ ಸೇರಿದಂತೆ ಹಲವು ಕಾಲುವೆಗಳ ಆಧುನೀಕರಣ, ರೈತರ ಸಹಭಾಗಿತ್ವದಲ್ಲಿ ಕೆರೆಗಳ ಜೀರ್ಣೋದ್ಧಾರ, ಕರಾವಳಿಯಲ್ಲಿ ಕಿಂಡಿ, ಬಾಂದಾರ ನಿರ್ಮಾಣ, ಅರ್ಕಾವತಿ ನದಿ ಪುನಶ್ಚೇತನಕ್ಕೆ ಒತ್ತು ನೀಡಲು ಮುಂಗಡಪತ್ರ ಉದ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.